ಮೈಸೂರು: ಮುಡಾದ 14 ವಿವಾದಿತ ಸೈಟ್ ಗಳನ್ನು ಸಿದ್ದರಾಮಯ್ಯ ಪತ್ನಿ ವಾಪಸ್ ಕೊಟ್ಟರೂ ಆ ಮುಡಾ ಸೈಟ್ ಗಳು ಅವರ ಸ್ವಂತ ಸೈಟ್ ಗಳಲ್ಲ ಎಂಬುದನ್ನು ನೆನಪಿಡಿ ಎಂದು ಕುಮಾರಸ್ವಾಮಿ ಛೇಡಿಸಿದರು.
ನಾಡಹಬ್ಬ ದಸರಾ ಪ್ರಯುಕ್ತ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತಾಡಿದ ಕೇಂದ್ರ ಸಚಿವ ಹೆಚ್.ಡಿಕೆ, ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಕೋವಿಡ್ ಸಮಯದಲ್ಲಿ ಅಕ್ರಮ ನಡೆಸಿದೆ ಎಂದು ತಿಳಿಸಿದ್ದು, ಅವ್ಯವಹಾರಗಳ ಬಗ್ಗೆ ತನಿಖೆ ಮಾಡಿಸಲು ಒಂದೂವರೆ ವರ್ಷ ಯಾಕೆ ಸುಮ್ಮನಿದ್ದು ಇದೀಗ ಏಕಾಏಕಿ ತನಿಖೆ ಮಾಡಿಸಲು ಮುಂದಾಗಿದ್ದಾರೆ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ತನಿಖೆ ನಡೆಸುವ ಜರೂರತ್ತು ಎದುರಾಗಿದ್ದು ಯಾಕೆ? ಈಗ ಮುಡಾ ಸೈಟ್ ಹಗರಣ ಕುತ್ತಿಗೆಗೆ ಬಂದು ಸಿಎಂ ಸೀಟು ಖಾಲಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದಾಗ ಕೋವಿಡ್ ಹಗರಣ ನೆನಪಾಯಿತೇ? ಎಂದು ಪ್ರಶ್ನಿಸಿದರು.