ಬೆಂಗಳೂರು:ಆಯುಧಪೂಜೆ ದಿನವೇ ತಮಿಳುನಾಡಿನಲ್ಲಿ ಎರಡೆರಡು ಅಪಘಾತದ ಭೀತಿ ಎದುರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ತಿರುಚಾನಪಳ್ಳಿಯಿಂದ ಶಾರ್ಜಾಗೆ ಹೊರಟಿದ್ದ ವಿಮಾನವೊಂದು ನಿಯಂತ್ರಣ ಕಳೆದುಕೊಂಡು ಪರದಾಟ ನಡೆಸಿತು. ಪೈಲೆಟ್ ಸಮಯ ಪ್ರಜ್ಞೆಯಿಂದ ಮೂರು ಗಂಟೆಗಳ ಕಾಲ ಆಗಸದಲ್ಲಿಯೇ ಹಾರಾಟ ನಡೆಸಿ, ಕೊನೆಗೂ ತಿರುಚಾನಪಳ್ಳಿ ವಿಮಾನ ನಿಲ್ದಾಣದಲ್ಲಿಯೇ ಸುರಕ್ಷಿತವಾಗಿ ಇಳಿಯಿತು.
ಅದೇ ರೀತಿ ಚೆನ್ನೈಗೆ ಸಮೀಪದ ತಿರುವಳ್ಳುವರ್ ಜಿಲ್ಲೆಯಲ್ಲಿ ಮೈಸೂರು-ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ, ಆರು ಬೋಗಿಗಳು ಹಳಿ ತಪ್ಪಿದ್ದು, ಮೂರು ಬೋಗಿಗಳಿಗೆ ಬೆಂಕಿ ತಗುಲಿ, ಸುಟ್ಟು ಹೋಗಿವೆ.
ಈ ಎರಡು ಪ್ರಕರಣದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ, ಶಾರ್ಜಾಗೆ ಹೊರಟಿದ್ದ ವಿಮಾನದಲ್ಲಿ 140 ಮಂದಿ ಪ್ರಯಾಣ ಬೆಳೆಸಿದ್ದರು. ಪೈಲೆಟ್ ಸಮಯಪ್ರಜ್ಞೆ ಅಷ್ಟು ಜನರ ಪ್ರಾಣ ಉಳಿಸಿದೆ ಎನ್ನಬಹುದು
ಅದೇ ರೀತಿ ಚೆನ್ನೈನ ತಿರುವಳ್ಳುವರ್ ಜಿಲ್ಲೆಯಲ್ಲಿ ಮೈಸೂರು-ದರ್ಬಾಂಗ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಬೋಗಿಗಳು ಹಳಿ ತಪ್ಪಿವೆ. ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಆ ಬೋಗಿಯಲ್ಲಿದ್ದ ಪ್ರಯಾಣಿಕರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಎರಡು ಘಟನೆಗಳು ತಮಿಳುನಾಡಿನಲ್ಲಿಯೇ ನಡೆದಿದ್ದು, ಎರಡು ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲದಿರುವುದು ನೆಮ್ಮದಿಯ ಸಂಗತಿ. ರೈಲ್ವೇ ಪ್ರಯಾಣಿಕರ ರಕ್ಷಣೆ ಮತ್ತು ಪರ್ಯಾಯ ಪ್ರಯಾಣದ ವ್ಯವಸ್ಥೆ ಹಾಗೂ ವಿಮಾನ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಸರಕಾರ ಕಾರ್ಯಾಚರಣೆ ನಡೆಸುತ್ತಿದೆ.