ಶ್ರೀರಂಗಪಟ್ಟಣ: ತನ್ನ ಹೆಂಡತಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನ ಮೇಲೆ ಮುಂಬಯಿಯಿಂದ ಬಂದಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಮಂಜು ಎಂಬ ಯುವಕ ಸೇರಿ ಮೂವರು ಯುವಕರು ತಮ್ಮ ಮನೆಯ ಜಗುಲಿಯ ಮೇಲೆ ಕುಳಿತಿದ್ದರು. ಕೆಲ ದಿನಗಳ ಹಿಂದಷ್ಟೇ ಮುಂಬಯಿ ಯಿಂದ ಬಂದಿದ್ದ ಆರೋಪಿ, ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಮಂಜು ತಲೆಗೆ ಬಿದ್ದರೂ, ಪ್ರಾಣಾಪಾಯದಿಂದ ಆತ ಪಾರಾಗಿದ್ದಾರೆ.
ಆರೋಪಿಯನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುಂಬಯಿ ಹೋಟೆಲ್ ಒಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದು, ಆತನ ಮಡದಿ ಗ್ರಾಮದಲ್ಲಿ ವಾಸವಿದ್ದಾಳೆ. ಈತ ಆರು ತಿಂಗಳು ಅಥವಾ ಒಂದು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಎನ್ನಲಾಗಿದೆ.
ಈ ನಡುವೆ ತನ್ನ ಪತ್ನಿ ಬೇರೊಬ್ಬನ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಆತನಿಗೆ ಬಂದಿತ್ತು. ಹೆಂಡತಿಯ ಜತೆಗೆ ಮಂಜು ಸಲುಗೆಯಿಂದ ಇರುವುದು ಗೊತ್ತಾಗಿ, ಈತನೇ ನನ್ನ ಹೆಂಡತಿಯ ಪ್ರಿಯಕರ ಎಂದುಕೊಂಡು ಕೊಲೆಗೆ ಯತ್ನಿಸಿದ್ದಾನೆ.
ತಲೆಗೆ ಪೆಟ್ಟುಬಿಟ್ಟಿರುವ ಮಂಜು ಎಂಬ ಯುವಕನಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಯತ್ನದ ಜತೆಗೆ ಆರೋಪಿಗೆ ಗನ್ ಹೇಗೆ ಸಿಕ್ಕಿತ್ತು? ಎಂಬೆಲ್ಲ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
updating…