ಅಪರಾಧ ಸುದ್ದಿ

ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಗಲಾಟೆ: ಲಾಠಿ ಚಾರ್ಜ್​

Share It

ಚಿಕ್ಕೋಡಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ಭಾನುವಾರ ರಾತ್ರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗಲಾಟೆ ನಿಲ್ಲಿಸಲು ಪೊಲೀಸರು ಲಘು ಲಾಠಿ ಚಾರ್ಜ್​ ಮಾಡಿ ಜನರನ್ನು ಚದುರಿಸಿದ್ದಾರೆ. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದ್ದು, ಎರಡು ಬೈಕ್ ಹಾಗೂ ಕಾರು ಜಖಂಗೊಂಡಿದೆ. ದುರ್ಗಾದೇವಿ ಮೂರ್ತಿ ವಿಸರ್ಜನೆ ಮುಗಿಸಿಕೊಂಡು ಬರುವಾಗ ಅಮಿತ ನಾಯಿಕ ಹಾಗೂ ಪೈರೋಜ್ ಎಂಬುವವರ ಮಧ್ಯೆ ಗಲಾಟೆ ಶುರುವಾಗಿದೆ.

ಈ ವೇಳೆ ಅಲ್ಲಿಯೇ ಇದ್ದ ಮಸೀದಿಯ ಮೈಕ್​ನಲ್ಲಿ ಅನ್ಯಕೋಮಿನ ಯುವಕರಿಂದ ನಮ್ಮವರ ಮೇಲೆ ಹಲ್ಲೆಯಾಗಿದೆ ಎಲ್ಲರೂ ಬನ್ನಿ ಎಂದು ಅನೌನ್ಸ್​ ಮಾಡಿದ್ದಾರೆ. ಅನೌನ್ಸ್​ನಿಂದ ಪ್ರಚೋದನೆಗೊಂಡ ಹಿಂದೂ ಮತ್ತು ಮುಸ್ಲಿಂ ಜನರು ಕೂಡಲೆ ಮಸೀದಿ ಬಳಿ ಸೇರಿದ್ದಾರೆ.

ಎರಡು ಗುಂಪಿನ ಜನ ಸೇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page