ಅಪರಾಧ ರಾಜಕೀಯ ಸುದ್ದಿ

CA ನಿವೇಶನ ವಾಪಸ್ಸು ನೀಡಿದ ಮಾತ್ರಕ್ಕೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

Share It


ಬೆಂಗಳೂರು: CA ನಿವೇಶನ ವಾಪಸ್ ಕೊಟ್ಟರೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಲೋಕಾಯುಕ್ತದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಿವೇಶನ ವಾಪಸ್ ನೀಡಲು ತೀರ್ಮಾನಿಸಿದ್ದಾರೆ‌. ಈ ಕುರಿತು ಪ್ರತಿಕ್ರಿಯೆ ನೀಡಿರುವ ದೂರುದಾರ ಎನ್.ಆರ್. ರಮೇಶ್, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ “ಶೈಕ್ಷಣಿಕ ಉದ್ದೇಶ” ಎಂಬ ಹೆಸರಿನಲ್ಲಿ “BDA” ಮತ್ತು “KIADB” ಸಂಸ್ಥೆಗಳಿಂದ ಬೆಂಗಳೂರಿನ 2 ಬೃಹತ್ CA ನಿವೇಶನ ಮಂಜೂರು ಮಾಡಲಾಗಿತ್ತು. ಈ ಸಂಬಂಧ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸಲಾಗಿತ್ತು.

ಆದರೆ, ಈಗ ಸೈಟ್ ವಾಪಸ್ ನೀಡುವ ಮೂಲಕ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಖರ್ಗೆ ಕುಟುಂಬ ಪ್ರಯತ್ನ ಮಾಡುತ್ತಿದೆ. 2 ಎಕರೆ ವಿಸ್ತೀರ್ಣದ 150 ಕೋಟಿಗೂ ಹೆಚ್ಚು ಮೌಲ್ಯದ CA ನಿವೇಶನ ಹಂಚಿಕೆಯಾಗಿದ್ದ ವಿಷಯ ಮರೆಮಾಚಿ “KIADB” ಮೂಲಕ 110 ಕೋಟಿಗೂ ಹೆಚ್ಚು ಮೌಲ್ಯದ 5 ಎಕರೆ ವಿಸ್ತೀರ್ಣದ CA ನಿವೇಶನ ಮಂಜೂರು ಮಾಡಿಸಿಕೊಂಡಿರುವುದು ಕಾನೂನು ಬಾಹಿರ, ವಾಪಸ್ ಕೊಟ್ಟ ಕಾರಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಸಂಬಂಧ ಕಾನೂನು ಹೋರಾಟ ನಡೆಸಲು ಮತ್ತು ಪ್ರಕರಣ ದಾಖಲಿಸಿಕೊಳ್ಳಲು “Prosecution Permission” ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಮೂರ್ನಾಲ್ಕು ದಿನದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುತ್ತಿದೆ. ರಾಜ್ಯಪಾಲರನ್ನು ಮತ್ತೇ ಭೇಟಿಯಾಗಿ, ಸಂಪೂರ್ಣ ವಿವರ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


Share It

You cannot copy content of this page