ಫ್ಯಾಷನ್ ಸಿನಿಮಾ ಸುದ್ದಿ

ಸುದೀಪ್ ಬಿಗ್ ಬಾಸ್‌ನಿಂದ ಹೊರಬಂದಿದ್ದೇಕೆ? ಸುದೀಪ್ ಮಾತಿನಂತೆ ಏನು ನಡೆಯುತ್ತಿಲ್ವಾ?

Share It

ಬೆಂಗಳೂರು: ಬಿಗ್ ಬಾಸ್ ಅಂದ್ರೆ ಯಾರು ಎಂಬುದು ಯಾರಿಗೂ ಗೊತ್ತಿಲ್ಲ, ಆದರೆ, ನೋಡುಗರು ಮತ್ತು ಅಭಿಮಾನಿಗಳ ಪಾಲಿಗೆ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್. ಆದರೆ, ಈ ಸಲದ ಬಿಗ್ ಬಾಸ್‌ನಲ್ಲಿ ಸುದೀಪ್ ಮಾತಿನಂತೆ ಏನೂ ನಡೆಯುತ್ತಿಲ್ವಾ? ಸುದೀಪ್ ಬಿಗ್ ಬಾಸ್ ಶೋ ನಿಂದ ಹೊರಗೆ ಬರಲು ಇದೇ ಕಾರಣವಾ?

ಬಿಗ್ ಬಾಸ್ ನಿರೂಪಣೆಯಿಂದ ಹೊರಬರುವ ವಿಚಾರವನ್ನು ಸುದೀಪ್ ವ್ಯಕ್ತಪಡಿಸುತ್ತಿದ್ದಂತೆ ಇಂತಹದ್ದೊAದು ಚರ್ಚೆ ಇದೀಗ ಎಲ್ಲೆಡೆ ಆರಂಭವಾಗ್ತಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಶೋನಲ್ಲಿ ಸುದೀಪ್ ಮಾತಿನಂತೆ ಏನೂ ನಡೆಯುತ್ತಿಲ್ಲ, ಅವರ ಮಾತಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗ್ತಿದೆ. ಇದರಿಂದಲೇ ಸುದೀಪ್ ಮನನೊಂದು ಬಿಗ್ ಬಾಸ್‌ನಿಂದ ಹೊರಬರುವ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್ ಬೇಡ ಎಂಬ ಅಭಿಪ್ರಾಯ ಹೇಳಿದ್ದಂತೆ, ಏಕೆಂದರೆ, ಮೇಲು ಕೀಳು ಎಂಬ ತಾರತಮ್ಯದ ಕಾನ್ಸೆಪ್ಟ್ ಕನ್ನಡ ವೀಕ್ಷಕರಿಗೆ ಅಷ್ಟೊಂದು ರುಚಿಸುವುದಿಲ್ಲ ಎಂಬುದು ಸುದೀಪ್ ಅವರ ಅಭಿಪ್ರಾಯ. ಆದರೆ, ಶೋನ ನಿರ್ದೇಶಕರು ಸುದೀಪ್ ಮಾತಿಗೆ ಬೆಲೆಕೊಡದೆ ಸ್ವರ್ಗ ನರಕ ರೂಪಿಸಿ ಕಾರ್ಯಕ್ರಮ ನಡೆಸಿದರು.

ಎರಡು ವಾರದ ನಂತರ ಈ ಕಾನ್ಸೆಪ್ಟ್ಗೆ ಭಾರಿ ವಿರೋಧ ವ್ಯಕ್ತವಾಯಿತು. ಮಹಿಳಾ ಆಯೋಗದಿಂದಲೂ ಖಂಡನೆ ವ್ಯಕ್ತವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ರಾಮನಗರ ಪೊಲೀಸರಿಗೆ ಪತ್ರ ಬರೆದಿದೆ. ರಾಮನಗರ ಪೊಲೀಸರು ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ನೀಡಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ಎಲ್ಲ ಕ್ರಮಗಳ ನಂತರ ಬಿಗ್ ಬಾಸ್ ನಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್ಗೆ ಅಂತ್ಯವಾಗಿದೆ.

ಕನ್ನಡವನ್ನೇ ಮಾತನಾಡಬೇಕು ಎಂಬ ಬಿಗ್ ಬಾಸ್‌ನಲ್ಲಿದ್ದ ನಿಯಮವನ್ನು ಗಾಳಿಗೆ ತೂರಲಾಗಿದೆ. ಸ್ಪರ್ಧಿಗಳು ಎಷ್ಟು ಬೇಕಾದರೂ ಇಂಗ್ಲೀಷ್‌ನಲ್ಲಿ ಮಾತನಾಡಬಹುದು. ಈ ಕುರಿತು ಸಬ್ ಟೈಟಲ್ ಆಗಲೀ, ಕನ್ನಡ ಮಾತಾಡಿ ಎಂಬ ಎಚ್ಚರಿಕೆಯಾಗಲೀ, ಬರುತ್ತಿಲ್ಲ. ಈ ಹಿಂದೆ ಇಂಗ್ಲೀಷ್ ಪದ ಬಳಕೆ ಹೆಚ್ಚಾದರೆ, ಕನ್ನಡದಲ್ಲಿ ಮಾತನಾಡುವಂತೆ ಎಚ್ಚರಿಕೆ ನೀಡಲಾಗುತ್ತಿತ್ತು.

ಈ ಅಂಶ ಕೂಡ ಸುದೀಪ್ ಅವರಿಗೆ ಬೇಸರ ತರಿಸಿದೆ. ಆದರೆ, ಮುಂಬೈನಿAದ ಬಂದಿರುವ ಹೊಸ ನಿರ್ದೇಶಕರು, ಕನ್ನಡದಲ್ಲೇ ಮಾತನಾಡಬೇಕು ಎಂಬ ನಿಯಮಕ್ಕೆ ವಿರೋಧಿಯಂತೆ. ಸ್ಪರ್ಧಿಗಳು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ತಪ್ಪಿಲ್ಲ, ಬೇರೆ ಭಾಷೆಯ ಶೋಗಳಲ್ಲಿ ಕನ್ನಡದಲ್ಲಿ ಮಾತನ್ನಾಡುತ್ತಾರೆ. ಹಾಗೆಯೇ ಬೇರೆ ಬೇರೆ ಭಾಷೆಗಳಲ್ಲಿ ಮಾತನ್ನಾಡುತ್ತಾರೆ. ಕನ್ನಡದಲ್ಲಿ ಮಾತ್ರ ಇಂತಹ ನಿಯಮ ಸರಿಯಲ್ಲ ಎಂದಿದ್ದಾರೆ.

ಇದು ಸಹಜವಾಗಿಯೇ ಸುದೀಪ್ ಅವರಿಗೆ ಬೇಸರ ತರಿಸಿದೆ. ಕರ‍್ಸ್ ಕನ್ನಡ ಚಾನೆಲ್‌ನ ಸಂಪೂರ್ಣ ಹಿಡಿತ ಮುಂಬೈ ಪಾಲಾಗಿದ್ದು, ಕನ್ನಡಿಗರು ಹೇಳಿದ ಯಾವುದೇ ಮಾತಿಗೆ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಏನೇ ಆಗಲೀ, ಕೆಲವು ಚಾನೆಲ್‌ಗಳು ಕನ್ನಡತನವನ್ನು ಹಾಳು ಮಾಡಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ, ರಾಜ್ಯದಲ್ಲಿ ಉತ್ತರ ಭಾರತದಂತಹ ಪರಿಸ್ಥಿತಿ ಮತ್ತು ಮನಸ್ಥೀತಿಯನ್ನು ಭಿತ್ತರಿಸುವ ಕೆಲಸ ಮಾಡುತ್ತಿವೆ. ಇದರ ಭಾಗವೇ ಬಿಗ್ ಬಾಸ್‌ನಲ್ಲಿ ಬೇಕಾಬಿಟ್ಟಿ ಕಾನ್ಸೆಪ್ಟ್ಗಳ ರಚನೆ ಮಾಡುತ್ತಿರುವುದು. ಇದೀಗಾಗಲೇ ಕನ್ನಡ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿರುವ ಬಿಗ್ ಬಾಸ್ ಸುದೀಪ್ ನಿರ್ಗಮನದ ನಂತರ ಯಾವ ರೀತಿ ಮುಂದುವರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.


Share It

You cannot copy content of this page