ನವದೆಹಲಿ: ಕೆನಡಾದಲ್ಲಿ ನೆಲೆಸಿರುವ ಭಾರತೀಯ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳು ಗೌಪ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಏಷ್ಯಾದ ಸಮುದಾಯದ ಸದಸ್ಯರನ್ನು ಗುರಿಯಾಗಿಸಲು ಭಾರತೀಯ ಸರ್ಕಾರಕ್ಕೆ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಆರೋಪಿಸಿದೆ.
ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಆರ್‌ಸಿಎಂಪಿ ಮೇ ನಲ್ಲಿ ಮೂವರನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದ ಆಪಾದನೆಯ ಮೇರೆಗೆ ಭಾರತದ ಹೈ ಕಮಿಷನರ್ ಸಂಜಯ್ ವರ್ಮಾ ರನ್ನು ವಾಪಸ್ಸು ಕರೆಸಿಕೊಂಡಿತ್ತು. ಭಾರತೀಯ ರಾಜತಾಂತ್ರಿಕರು ನೇರವಾಗಿ ಮತ್ತು ಪರೋಕ್ಷವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರ್‌ಸಿಎಂಪಿ ಆರೋಪಿಸಿದೆ.
ಕೆನಡಾದಲ್ಲಿ ನಡೆಯುವ ಗಂಭೀರ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರುಗಳು ಭಾಗಿಯಾಗಿರುವ ಸಂಗತಿ ಅನೇಕ ತನಿಖೆಗಳಲ್ಲಿ ಸಾಬೀತಾಗಿದೆ ಎಂದು ಆರ್‌ಸಿಎಂಪಿ ಹೇಳಿದೆ.
ಕೆನಡಾ ಮತ್ತು ದಕ್ಷಿಣ ಏಷ್ಯಾ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ಅಂತಿಮ ಗುರಿಯೊಂದಿಗೆ ಭಾರತ ಸರ್ಕಾರ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ ಎಂದು ಆರ್‌ಸಿಎಂಪಿ ಹೇಳಿದೆ.
ಸೋಮವಾರ ಭಾರತ ಹೇಳಿರುವಂತೆ ಕೆನಡಾದಲ್ಲಿ ನಡೆದ ಅಪರಾಧಗಳಿಗೆ ಭಾರತೀಯ ಸಂಸ್ಥೆಗಳ ಹಸ್ತಕ್ಷೇಪ ಇರುವ ಯಾವುದೇ ದಾಖಲೆಗಳು ಅಥವಾ ಪುರಾವೆಗಳನ್ನು ನೀಡಿಲ್ಲ ಎಂದು ತಿಳಿಸಿದೆ. ಆರ್‌ಸಿಎಂಪಿ ನಾಲ್ಕು ಮುಖ್ಯ ಅತ್ಯಂತ ಗಂಭೀರ ಸಾಕ್ಷ್ಯವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ.
ಎರಡೂ ದೇಶಗಳ ಮೇಲೆ ಪ್ರಭಾವ ಬೀರುವ ಹಿಂಸಾತ್ಮಕ ಉಗ್ರವಾದ, ನರಹತ್ಯೆಗಳು ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಭಾರತೀಯ ಸರ್ಕಾರದ ಏಜೆಂಟ್‌ಗಳನ್ನು ಬಂಧಿಸಲಾಗುವುದು. ಕೆನಡಾದಲ್ಲಿ ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸಿಕೊಂಡು ಅಸುರಕ್ಷಿತ ವಾತಾವರಣ ಸೃಷ್ಟಿಸಲು ಸಂಘಟಿತ ಅಪರಾಧ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ.
ಕೆನಡಾದಲ್ಲಿ ಸಕ್ರಿಯವಾಗಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾರತೀಯ ಸರ್ಕಾರಿ ಏಜೆಂಟರೊಂದಿಗೆ ಸಂಪರ್ಕ ಹೊಂದಿದೆ ಎಂದು ಆರ್‌ಸಿಎಂಪಿ ಹೇಳಿಕೊಂಡಿದೆ.
ಎರಡೂ ದೇಶಗಳಲ್ಲಿ ಸಂಭವಿಸುವ ಹಿಂಸಾತ್ಮಕ ಉಗ್ರವಾದದ ಕುರಿತು ಚರ್ಚಿಸಲು ಕೆನಡಾದ ಪೋಲೀಸ್ ಅವರ ಭಾರತೀಯ ಸಹವರ್ತಿಗಳನ್ನು ಭೇಟಿ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ ಎಂದು ಆರ್‌ಸಿಎಂಪಿ ಹೇಳಿಕೊಂಡಿದೆ, ನಂತರ ವಾರಾಂತ್ಯದಲ್ಲಿ ನವದೆಹಲಿ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು ಎಂದು ತಿಳಿಸಲಾಗಿದೆ.