ಬೆಂಗಳೂರು: ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ಸೇರಿ ವಿವಿಧ ಪ್ರದೇಶಗಳಿಗೆ ಹಾರಾಟ ನಡೆಸಬೇಕಿದ್ದ ಎಂಟು ವಿಮಾನಗಳನ್ನು ರದ್ದು ಮಾಡಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ, ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು, ದೆಹಲಿ, ಅಂಡಮಾನ್ ಮತ್ತು ಮಸ್ಕತ್ ಗೆ ತೆರಳಬೇಕಿದ್ದ ಎಂಟು ವಿಮಾನಗಳು ರದ್ದಾಗಿವೆ ಎಂದು ತಿಳಿಸಿದೆ.
ಬೆಳಗ್ಗೆ 7.15 ಚೆನ್ನೈ ನಿಂದ ಬೆಂಗಳೂರಿನಿಂದ ಚೆನ್ನೈಗೆ ಆಗಮಿಸಬೇಕಿದ್ದ ಆಕಾಸ ಏರ್ ಪ್ಲೈಟ್, ಮಧ್ಯಾಹ್ನ 1 ಗಂಟೆಗೆ ಅಂಡಮಾನ್ ನಿಂದ ಚೆನ್ನೈಗೆ ಆಗಮಿಸಬೇಕಿದ್ದ ಆಕಾಸ ಏರ್ ಪ್ಲೈಟ್ ಹಾಗೂ ಮಧ್ಯಾಹ್ನ3.20 ಕ್ಕೆ ದೆಹಲಿಯಿಂದ ಚೆನ್ನೈಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಹಾಗೂ ಬೆಳಗ್ಗೆ ಮಸ್ಕತ್ ನಿಂದ ಆಗಮಿಸಬೇಕಿದ್ದ ಒಮನ್ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.
ಅದೇ ರೀತಿ ಬೆಳಗ್ಗೆ 7.45 ಕ್ಕೆ ಅಂಡಮಾನ್ ಗೆ ತೆರಳಬೇಕಿದ್ದ ಆಕಾಸ ಏರ್ಲೈನ್ಸ್, ಮಧ್ಯಾಹ್ನ1.45 ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಆಕಾಸ್ ಏರ್ಲೈನ್ಸ್ ವಿಮಾನ, ಮಸ್ಕತ್ ಗೆ ಹೊರಡಬೇಕಿದ್ದ ಒಮನ್ ಏರ್ಲೈನ್ಸ್ ವಿಮಾನ ಹಾಗೂ ಸಂಜೆ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.
ತಮಿಳುನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸ್ಟಾಲಿನ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲು ಕಂಪನಿಗಳಿಗೆ ಶಿಫಾರಸು ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.