ಅಪರಾಧ ಸುದ್ದಿ

ದೆಹಲಿ: ಗುಂಡಿನ ದಾಳಿಯಿಂದ ವ್ಯಕ್ತಿಯ ಜೀವ ಉಳಿಸಿದ ಮೊಬೈಲ್

Share It

ಹೊಸದಿಲ್ಲಿ: ವ್ಯಕ್ತಿಯೊಬ್ಬನ ಮೇಲೆ ಹಾರಿಸಿದ ಗುಂಡನ್ನು ಮೊಬೈಲ್ ಪೋನ್ ತಡೆದು ವ್ಯಕ್ತಿಯ ಜೀವ ಉಳಿಸಿರುವ ಘಟನೆ ಸೋಮವಾರ ಪಂಜಾಬಿನ ಬಾಗ್‌ನ ಸಿಮೆಂಟ್ ಸೈಡಿಂಗ್ ಸ್ಥಳದಲ್ಲಿ ನಡೆದಿದೆ.

ಅಕ್ಟೋಬರ್ 13 ರಂದು ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಶಾಂತಿ ಹಾಗೂ ಅವಳ ಸಹಚರರಾದ ಅರ್ಜುನ್, ಕಮಲ್ ಮತ್ತು ಜಿತೇಂದರ್ ಮತ್ತೊಂದು ಕುಟುಂಬದೊಂದಿಗೆ ಮಾತುಕತೆಗೆ ಹೋಗಿದ್ದರು.

ಸಾಹಿಲ್, ನಸೀಬ್ ಮತ್ತು ರಿತಿಕ್ ಎಂಬುವವರು ಅವರ ಮೇಲೆ ದಾಳಿಯನ್ನು ಮಾಡಿದ್ದಾರೆ. ವಾಗ್ವಾದದ ವೇಳೆ ಅರ್ಜುನ್ ಎಂಬಾತ ರಿತಿಕ್ ಮೇಲೆ ಗುಂಡು ಹಾರಿಸಿದ್ದಾನೆ. ರಿತಿಕ್ ನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್‌ ಗೆ ಬುಲೆಟ್ ತಾಗಿದ್ದು, ರಿತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಳಿಕೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ.


Share It

You cannot copy content of this page