ರಾಯಚೂರು: ಹೊಲದ ಬದುವಿಗೆ ಹಾಕಿದ್ದ ಬಂಡೆಯೊಂದು ಉರುಳಿ ಆಟವಾಡುತ್ತಿದ್ದ ಮಕ್ಕಳಿಬ್ಬರು ಮರಣವೊಂದಿರುವ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಗೌಡೂರು ತಾಂಡಾದ 9 ವರ್ಷದ ಮಂಜುನಾಥ್, 8 ವರ್ಷದ ವೈಶಾಲಿ ಮೃತ ಮಕ್ಕಳು. ಮತ್ತೊಂದು ಮಗುವಿನ ಕಾಲು ಮುರಿದಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೋಷಕರೊಂದಿಗೆ ಮಕ್ಕಳು ಜಮೀನಿಗೆ ತೆರಳಿದ್ದು, ಹೊಲದ ಬದುವಿನಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಬದುವಿಗೆ ಹಾಕಿದ್ದ ಬಂಡೆ ಏಕಾಏಕಿ ಉರುಳಿದ್ದು, ಮಕ್ಕಳು ಬಂಡೆಯಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.