ಹಾಸನ; ನಗರಸಭೆ ವ್ಯಾಪ್ತಿಯ ಅಕ್ರಮ ಕಟ್ಟಡಗಳು ಮತ್ತು ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆಯನ್ನು ಆಯುಕ್ತ ನರಸಿಂಹಮೂರ್ತಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಅಕ್ರಮ ಕಟ್ಟಡಗಳ ತೆರವಿಗೆ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಆಧಾರದಲ್ಲಿ ಆಯುಕ್ತರು ತೆರವು ಕಾರ್ಯ ಆರಂಭಿಸಿದ್ದಾರೆ.
ನಗರಸಭೆಯ ಕಾರ್ಯಕ್ಕೆ ಕಲವು ಕಟ್ಟಡಗಳ ಮಾಲೀಕರು ವಿರೋಧ ವ್ಯಕ್ತಪಡಿಸಿ, ಆಯುಕ್ತರ ಜತೆಗೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಹೀಗಾಗಿ, ಪೊಲೀಸರ ಸರ್ಪಗಾವಲಿನಲ್ಲಿ ತೆರವು ಕಾರ್ಯ ನಡೆಸಲಾಗುತ್ತಿದೆ.
ಜೆಸಿಬಿಯಿಂದ ತೆರವು ಕಾರ್ಯ ನಡೆಸುತ್ತಿರುವುದನ್ನಿ ವಿರೋಧಿಸಿ ತಣ್ಣೀರುಹಳ್ಳ ವ್ಯಾಪ್ತಿಯಲ್ಲಿ ಕೆಲವು ಮಾಲೀಕರು ವಾಗ್ವಾದ ನಡೆಸಿದರು. ಆದರೆ, ಆಯುಕ್ತರು ಇದಕ್ಕೆಲ್ಲ ಜಗ್ಗದೆ ತೆರವು ಕಾರ್ಯ

