ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು: ಅರ್ಕಾವತಿ ನಿವೇಶನದಾರರಿಂದ ದೂರು

Share It

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಮಗೆ ಸೈಟ್ ಕೊಟ್ಟು, ಈಗ ನಮ್ಮ ಸೈಟ್ ಇಲ್ಲವೇ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿ ಅರ್ಕಾವತಿ ಬಡಾವಣೆ ನಿವೇಶನ ಮಾಲೀಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತರಾಗಿದ್ದ ಶ್ಯಾಂ ಭಟ್ ಸೇರಿ ಇತರೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆಯಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ಅಧಿಕಾರ ದುರ್ಬಳಕೆಯಿಂದ ಭೂಗಳ್ಳರ ಪಾಲಾಗುತ್ತಿದೆ. ಹೀಗಾಗಿ, ಅನೇಕ ಜನರಿಗೆ ರಿಜಿಸ್ಟರ್ ಆಗಿದ್ದ ನಿವೇಶನ ನಮಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.

2006 ರಲ್ಲಿ ರಿಜಿಸ್ಟರ್ ಮಾಡಿಸಿಕೊಂಡು ಅಂದಿನಿಂದ ಈವರೆಗೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. 2004 ರಲ್ಲಿ ಬಿಡಿಎನಿಂದ ಅರ್ಜಿ ಕರೆಯಲಾಗಿತ್ತು. 16 ಹಳ್ಳಿಗಳ ವ್ಯಾಪ್ತಿಯಲ್ಲಿ 800 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿತ್ತು. 12 ಸಾವಿರ ಜನರಿಗೆ ನಿವೇಶನ ರಿಜಿಸ್ಟರ್ ಮಾಡಿಕೊಡಲಾಗಿತ್ತು.

2014 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡಿ ನೋಟಿಫಿಕೇಷನ್ ಮೂಲಕ ಹಲವಾರು ಬದಲಾವಣೆ ತರಲಾಗಿತ್ತು. ಇದರಿಂದಾಗಿ ಬಹುತೇಕ ನಿವೇಶನಗಳು ಭೂಗಳ್ಳರ ಪಾಲಾಗಿವೆ. ಹೀಗಾಗಿ, ನ್ಯಾಯ ಒದಗಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗಿದೆ.


Share It

You cannot copy content of this page