ದುಬೈ : ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆಡೆದ ಮಹಿಳಾ ಟಿ 20 ವಿಶ್ವ ಕಪ್ ನ ಫೈನಲ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳೆಯರು 32 ರನ್ ಗಳಿಂದ ಗೆದ್ದು ತಮ್ಮ ಮೊದಲ ವಿಶ್ವ ಕಪ್ ಅನ್ನು ಮುಡಿಗೆರಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಲಾರಾ ವುಲ್ವಾರದ್ ನಾಯಕತ್ವದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಪರ ಬ್ಯಾಟಿಂಗ್ ಆಡಲು ಆರಂಭಿಕ ಆಟಗಾರರಾಗಿ ಸೂಝಿ ಬೀಟ್ಸ್ ಮತ್ತು ಜಾರ್ಜಿಯ ಪ್ಲೀಮ್ಮರ್ ಕಣಕ್ಕಿಳಿದರು. ಸೂಝಿ ಬೀಟ್ಸ್ 31 ಬಾಲ್ ಗಳಲ್ಲಿ 32 ರನ್ ಕಲೆಹಾಕುವುದ ಮೂಲಕ ಉತ್ತಮ ಆರಂಭ ನೀಡಿದರು. ಇನ್ನು ಜಾರ್ಜಿಯ ಪ್ಲೀಮ್ಮರ್ ಕೇವಲ 9 ರನ್ ಗಳಿಗೆಯೇ ಸುಸ್ತಾಗಿ ಪೆವಿಲಿಯನ್ ಸೇರಿದರು.
ಬಳಿಕ ಬಂದ ಅಮಿಲಿಯ ಕೇರ್ 38 ಬಾಲ್ ಗಳಲ್ಲಿ 43 ರನ್ ಸಿಡಿಸಿದರು. ನಂತರ ಬಂದ ನಾಯಕಿ ಸೋಫಿ ಡಿವೈನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಾಗದೆ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಬಲಿಕ ಕಣಕ್ಕಿಳಿದ ಬ್ರೂಕ್ ಹಾಲಿಡೇ ಕೇವಲ 28 ಬಾಲ್ ಗಳಲ್ಲಿ 38 ರನ್ ಸಿಡಿಸಿದರು. ಇವರ ಸಹಾಯದಿಂದ ಕಿವೀಸ್ ಸೀಮಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳ ಟಾರ್ಗೆಟ್ ನೀಡಿತು.
ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಟಾರ್ಗೆಟ್ ಅನ್ನು ಬೆನ್ನತ್ತಲು ಬಂದ ಸೌತ್ ಆಫ್ರಿಕಾ ಬ್ಯಾಟರ್ ಗಳಾಗಿ ನಾಯಕಿ ಲಾರಾ ವುಲ್ವಾರದ್ ಮತ್ತು ತಾಜ್ಮೀನ್ ಬ್ರಿಟ್ಸ್ ಮೈದಾನಕ್ಕಿಳಿದರು. ನಾಯಕಿ ಲಾರಾ ವುಲ್ವಾರದ್ ರವರ 33 ರನ್ ಗಳ ಏಕಾಂಗಿ ಹೋರಾಟ ಬಿಟ್ಟರೆ ಕಿವೀಸ್ ಬೌಲರ್ ಗಳನ್ನು ಎದುರಿಸಿ ಕ್ರೀಸ್ ನಲ್ಲಿ ನಿಲ್ಲುವಷ್ಟು ಯಾವ ಬ್ಯಾಟರ್ ಕೂಡ ಧೈರ್ಯ ಮಾಡಲಿಲ್ಲ.
ಸೀಮಿತ 20 ಓವರ್ ಗಳಲ್ಲಿ ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಅನ್ನು ಬೆನ್ನತ್ತಲು ಸಾಧ್ಯವಾಗದ ಸೌತ್ ಆಫ್ರಿಕಾ ತನ್ನ 9 ವಿಕೆಟ್ ಗಳನ್ನು ಕಳೆದುಕೊಂಡು 128 ರನ್ ಗಳನ್ನು ಕಲೆಹಾಕಿ 32 ರನ್ ಗಳಿಂದ ಸೋಲನ್ನೊಪ್ಪಿತು.
ಇನ್ನು ನ್ಯೂಜಿಲೆಂಡ್ ಪರ ಬೌಲ್ ಮಾಡಿದ ರೋಸ್ಸ್ಮೆರಿ ಮೈರ್ ಮತ್ತು ಅಮಿಲಿಯ ಕೇರ್ ತಲಾ 3 ವಿಕೆಟ್ ಪಡೆದು ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶಿವರಾಜು ವೈ. ಪಿ
ಎಲೆರಾಂಪುರ