ನಾಳೆ ಸಂಜೆ 4 ಗಂಟೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಿರುವ ಅಧಿಕಾರಿಗಳು
ಬೆಂಗಳೂರು: ಮಾಲ್ ಗಳಲ್ಲಿ ತಯಾರಿಸುವ ಆಹಾರದ ಗುಣಮಟ್ಟ ಪರೀಕ್ಷರಗೆ ರ್ಯಾಪಿಡ್ ಮಾದರಿಯನ್ನು ಪರಿಚಯಿಸಿದ್ದು, ನಾಳೆ ಪ್ರಯೋಗಿಕ ಪರೀಕ್ಷೆ ಆರಂಭವಾಗಲಿದೆ.
ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಹೆಬ್ಬಾಳದ ಮಾಲ್ ಆಫ್ ಏಷ್ಯಾ ದಲ್ಲಿ ಪ್ರಾಯೋಗಿಕ ಪರೀಕ್ಷಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮ್ಯಾಜಿಕ್ ಬಾಕ್ಸ್/ರಾಪಿಡ್ ಟೆಸ್ಟ್ ಕಿಟ್ ಬಳಸಿ ತ್ವರಿತ ಪರೀಕ್ಷೆ/spot test ನಡೆಸಲಿದೆ.
ಮುಂದಿನ ದಿನಗಳಲ್ಲಿ ಎಲ್ಲ ಮಾಲ್ ಮತ್ತು ಬೃಹತ್ ಆಹಾರ ಮಳಿಗೆಗಳಲ್ಲಿ ಇಂತಹದ್ದೇ ವ್ಯವಸ್ಥೆ ಜಾರಿಗೆ ಬರಲಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷೆಯನ್ನು ಸುಲಭದಲ್ಲಿ ಮಾಡಲು ಇದು ಅನುಕೂಲವಾಗಲಿದೆ. ಹೀಗಾಗಿ, ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗುತ್ತಿದೆ.
ಆಹಾರದಲ್ಲಿ ಬಳಸುತ್ತಿರುವ ರಾಸಾಯನಿಕ ಮತ್ತು ಬಣ್ಣಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ಇತ್ತೀಚಿನ ಅಧ್ಯಯನ ದಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಆಹಾರದ ಗುಣಮಟ್ಟವನ್ನು ಪರೀಕ್ಷೆ ನಡೆಸಲಾಗುತ್ತಿದೆ.