ಪುಣೆ : ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆಡೆದ ಭಾರತ ಮತ್ತು ಕಿವೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ತನ್ನ ಕಂಬ್ಯಾಕ್ ಪಂದ್ಯದಲ್ಲಿಯೇ ಅಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾಗಿ ನಾಯಕ ಟಾಮ್ ಲೆತಮ್ ಮತ್ತು ಡೆವಾನ್ ಕಾನ್ವೆ ಕಣಕ್ಕಿಳಿದರು. ಎಂದಿನಂತೆ ನಾಯಕ ಲೆತಮ್ ನೀರಸ ಪ್ರದರ್ಶನದಿಂದ
ಅಶ್ವಿನ್ ಗೆ ವಿಕೆಟ್ ಒಪ್ಪಿಸಿ ಹೊರನೆಡೆದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಎಡಗೈ ದಾಂಡಿಗ ಕಾನ್ವೆ 76 ರನ್ ಗಳನ್ನು ಕಲೆಹಾಕಿದರು.
ಬಳಿಕ ಬಂದ ವಿಲ್ ಯಂಗ್ ಕೇವಲ 18 ರನ್ ಗಳಿಗೆಯೇ ಸುಸ್ತಾದರು. ನಂತರ ಕಳೆದ ಪಂದ್ಯದಲ್ಲಿ ಶತಕ ಭಾರಿಸಿ ಮಿಂಚಿದ್ದ ರಚಿನ್ ರವೀಂದ್ರ 65 ರನ್ ಕಲೆಹಾಕಿ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು.
ಇನ್ನು ಸ್ಯಾಂಟ್ನರ್ ರವರ 33 ರನ್ ಬಿಟ್ಟರೆ ಇನ್ನು ಯಾವ ಆಟಗಾರರೂ ಸಹ ಒಂದಂಕಿ ಸಂಖ್ಯೆಯನ್ನು ದಾಟಲಿಲ್ಲ. ಪಂದ್ಯದ ಮೊದಲ ದಿನದಂದೇ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ ಕಿವೀಸ್ 259 ರನ್ ಗಳನ್ನು ಕಲೆಹಾಕಿದೆ.
ಇನ್ನು ಭಾರತದ ಪರ ಬೌಲಿಂಗ್ ಮಾಡಿದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತನ್ನ ಕಂಬ್ಯಾಕ್ ಪಂದ್ಯದಲ್ಲಿಯೇ 7 ವಿಕೆಟ್ ಪಡೆದು ಕಿವೀಸ್ ಎದೆಯಲ್ಲಿ ನಡುಕ ಉಟ್ಟಿಸಿದರು. ಮತ್ತೊರ್ವ ಅನುಭವಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಕೂಡ 3 ವಿಕೆಟ್ ಪಡೆದು ಮಿಂಚಿದರು.
ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಬ್ಯಾಟ್ ಬೀಸಲು ನಾಯಕ ರೋಹಿತ್ ಶರ್ಮ ಮತ್ತು ಯುವ ಆಟಗಾರ ಯಶಸ್ವಿ ಜಸ್ವಾಲ್ ಮೈದಾನಕ್ಕಿಳಿದರು. ನಾಯಕ ರೋಹಿತ್ ಶರ್ಮ ಸೊನ್ನೆಗೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಶಿವರಾಜು ವೈ. ಪಿ
ಎಲೆರಾಂಪುರ