ಕಡುನಾಡ ಕನ್ನಡ ಕಲಾ ಸಿರಿ ಬಳಗದಿಂದ 400 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು: ಕರುನಾಡ ಕನ್ನಡ ಕಲಾ ಸಿರಿ ಬಳಗ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 400 ಕನ್ನಡ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಮೂಲಕ ದಾಖಲೆ ಸೃಷ್ಡಿಸಿದೆ.
ಕೆಂಗೇರಿ ಉಪನಗರದ ಸುರಾನಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ಅಭಿಜಿತ್, ಕನ್ನಡ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಅಭಿಜಿತ್, ಕನ್ನಡ ಶಿಕ್ಷಕರೇ ಇಂದು ಕನ್ನಡ ಉಳಿಸಲು ಶ್ರಮಿಸುತ್ತಿರುವ ಸೇನಾನಿಗಳು. ಮನೆಯಲ್ಲಿ ಅಪ್ಪ-ಅಪ್ಪನೇ ಮಮ್ಮಿ- ಡ್ಯಾಡಿ ಹೇಳಿಕೊಡುತ್ತಿದ್ದು, ಅದನ್ನು ಕನ್ನಡ ಶಿಕ್ಷಕರು ಅಪ್ಪ- ಅಮ್ಮ ಕಲಿಸುವ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು.
ರಾಜ್ಯಾದ್ಯಂತ ಕನ್ನಡ ಕಲಿಸುವ ಮೂಲಕ ಭಾಷೆಯ ಸಮೃದ್ಧತೆಗೆ ಶ್ರಮಿಸುತ್ತಿರುವ 400 ಶಿಕ್ಷಕರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.ಇಂತಹ ಕಾರ್ಯವನ್ನು ಮಾಡುತ್ತಿರುವ ಅಂಬರೀಶ್ ಮತ್ತು ಅವರ ತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಂಬರೀಶ್, ಸಾಹಿತಿ ಟಿ. ಯಲ್ಲಪ್ಪ, ಸಮಾಜ ಸೇವಕರಾದ ಹೊಸಕೋಟೆ ವೆಂಕಟೇಶ್ ಮೂರ್ತಿ, ಸಂಘಟನಾ ಕಾರ್ಯದರ್ಶಿ ನವೀನ್, ಮಾಧ್ಯಮ ಸಲಹೆಗಾರ ಚಂದ್ರ ಚೌಗಲಾ, ಕೃಷ್ಣ ಮೊದಲಾದ ಗಣ್ಯರು ಭಾಗವಹಿಸಿದ್ದರು.


