ಪಾರ್ಕಿಂಗ್ ಮಾಡಲಾಗಿದ್ದ 12 ಬೈಕ್ ಗಳು ಬೆಂಕಿಗೆ ಆಹುತಿ

Share It

ಬೆಂಗಳೂರು: ಪಾರ್ಕಿಂಗ್ ಮಾಡಲಾಗಿದ್ದ ಎರಡು ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ 12 ಬೈಕ್ ಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ನಗರದ ಉಲ್ಲಾಳ ಬಳಿ ನಡೆದಿದೆ.

ಭಾನುವಾರ ಮುಂಜಾನೆ ಈ ಅವಘಡ ನಡೆದಿದ್ದು, ಡಾಮಿನೋಸ್ ಪಿಜ್ಜಾ ಡೆಲಿವರಿ ಮಾಡಲು ಬಳಸುತ್ತಿದ್ದ ಬೈಕ್ ಗಳು ಬೆಂಕಿಗಾಹುತಿಯಾಗಿವೆ.

ಕೆಲಸ ಮುಗಿಸಿದ ಬಳಿಕ ನೆಲಮಹಡಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳಿಗೆ ರಾತ್ರಿ ವೇಳೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಅಲ್ಲದೆ, ಘಟನೆಯಲ್ಲಿ ಜನರೇಟರ್‌ಗೆ ಹಾನಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Share It

You May Have Missed

You cannot copy content of this page