ಬೆಂಗಳೂರು: ಕೋರಮಂಗಲ ಶಾಸಕರ ಕಛೇರಿ ಆವರಣದಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಪಿಂಚಣಿ ಅದಾಲತ್ ಗೆ ಚಾಲನೆ ನೀಡಿದರು.
ಬೆಂಗಳೂರು ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ತಾಲ್ಲೂಕು ಉಪ ತಹಶೀಲ್ದಾರ್ ಕಾರ್ಯಾಲಯದ ವತಿಯಿಂದ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅರ್ಹ ಪಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ನಂತರ ಹೊಸ ಪಿಂಚಣಿ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಮಾಜಿ ಮಹಾಪೌರರು ಹಾಗೂ ಮಾಜಿ ಪಾಲಿಕೆ ಸದಸ್ಯರಾದ ಬಿ. ಎನ್. ಮಂಜುನಾಥ್ ರೆಡ್ಡಿ, ಬಿ. ಮೋಹನ್, ಎಂ. ಚಂದ್ರಪ್ಪ, ಜಿ. ಮಂಜುನಾಥ್, ಮುರುಗೇಶ್ ಮೊದಲಿಯಾರ್, ಜಿ ಎನ್ ಆರ್. ಬಾಬು ಹಾಗೂ ಮಂಜುಳಸಂಪತ್ ಕುಮಾರ್, ಉಪತಹಶೀಲ್ದಾರ್( ಬೇಗೂರು) ದೀಪಕ್, ರಾಜಸ್ವ ನಿರೀಕ್ಷಕರಾದ ಕವಿತಾ, ಗ್ರಾಮ ಆಡಳಿತಧಿಕಾರಿ ಪ್ರಶಾಂತ್ ಹಾಗೂ ಶಿವಪ್ರಸಾದ್, ಬ್ಲಾಕ್ ಅಧ್ಯಕ್ಷರು ಮತ್ತು ವಾರ್ಡ್ ಅಧ್ಯಕ್ಷರು, ಎಂ. ಸಂಪಂಗಿರಾಜು, ಸವಿತಾ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.