ಅಪರಾಧ ಸುದ್ದಿ

ದೇವಸ್ಥಾನ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧಿಸಿದ ಪೊಲೀಸರು

Share It

ಬೆಳಗಾವಿ: ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಹಾರೂಗೇರಿ ಪೊಲೀಸರು ಒಟ್ಟು 11.52 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 09/10/2024 ರಂದು ಅನೀಲ ಶಂಕರ ದತ್ತವಾಡೆ, ಸಾ.ಅಳಗವಾಡಿ, ತಾ.ರಾಯಬಾಗ, ಇವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕಳ್ಳರು ದಿನಾಂಕ: 05/10/2024 ರಂದು 1 ಗಂಟೆಯಿಂದ 6 ಗಂಟೆಯ ನಡುವಿನ ವೇಳೆಯಲ್ಲಿ ಅಳಗವಾಡಿ ಗ್ರಾಮದ ಹುಣಸಿಕೋಡಿ ತೋಟದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಗುಡಿಯ ಒಳಗಡೆ ಹೊಕ್ಕು ಮೈಮೇಲೆ ಇದ್ದ 1) ಗಂಟನ್ ಗುಳದಾಳಿ ಒಂದು 35 ಗ್ರಾಂ ಅ.ಕಿ.1.26.000/- ರೂಪಾಯಿ. 2) ಬೋರಮಾಳ ಒಂದು 10 ಗ್ರಾಂ ಅಂದಾಜು ಕಿಮ್ಮತ್ತು 36,000/-. 3) ಸಣ್ಣ ಗುಳದಾಳಿ 10 ಗ್ರಾಂ ಅಂದಾಜು ಕಿಮ್ಮತ್ತು 36,000/- 4) ಕಿವಿಯಲ್ಲಿರುವ ಹೂವು ಮತ್ತು ಜುಮಕಿ 5 ಗ್ರಾಂ, ಅಂದಾಜು ಕಿಮ್ಮತ್ತು 18.000/- ರೂಪಾಯಿ. 5) ಬೆಳ್ಳಿ ಗುಂಡಗಡಿಗೆ ಒಂದು 6) ಬೆಳ್ಳಿ ಕಿರೀಟ. 7) ಬೆಳ್ಳಿ ಮೂಗುತಿ ಒಂದು ಒಟ್ಟು ಬೆಳ್ಳಿ ಒಡವೆಗಳ ಅಂದಾಜು ಮೌಲ್ಯ 14.000/- ರೂ. ಹೀಗೆ ಒಟ್ಟು 2,16,000/- ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು 14,000/- ರೂಪಾಯಿ ಕಿಮ್ಮತ್ತಿನ ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿರುವ ಹಾರುಗೇರಿ ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


Share It

You cannot copy content of this page