ಭಾರೀ ಕುತೂಹಲ : ಇಂದೇ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಾಧ್ಯತೆ: ಯಾರಿಗೆ ಸಿಗುತ್ತದೆ ರಾಜ್ಯೋತ್ಸವ ಪ್ರಶಸ್ತಿ ?

Share It

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬುಧವಾರ ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಾರಿ ರಾಜ್ಯದ ಸುಮಾರು 69 ಸಾಧಕರಿಗೆ ಪ್ರಶಸ್ತಿ ನೀಡುವ ಸಾಧ್ಯತೆ ಇದೆ.

5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನ ನೀಡಲಾಗುತ್ತಿದೆ. ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರರ ಪಟ್ಟಿ ಅಂತಿಮವಾಗಿದ್ದು ಇಷ್ಟರಲ್ಲೇ ಬಿಡುಗಡೆಯಾಗಲಿದೆ.

ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಉನ್ನತಮಟ್ಟದ ಸಭೆ ನಡೆದಿದ್ದು, ಅದರಲ್ಲಿ ಬಂದ ಶಿಫಾರಸುಗಳ ಅನುಸಾರ ಆಯ್ಕೆ ನಡೆಸಲಾಗಿದೆ. ಪ್ರತಿ ಬಾರಿ ಆಯ್ಕೆಯ ವೇಳೆಯೂ ಕೆಲ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಅದಕ್ಕೆ ಆಸ್ಪದವಿಲ್ಲದಂತೆ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.


Share It

You May Have Missed

You cannot copy content of this page