ಕೇರಳಕ್ಕೂ ಮಾದರಿಯಾದ ‘ಶಕ್ತಿ ಯೋಜನೆ’ : ಆದರೆ, ತಿರುವನಂತಪುರದ ಹಿರಿಯ ನಾಗರಿಕರಿಷ್ಟೇ KSRTCಯಲ್ಲಿ ಉಚಿತ ಪ್ರಯಾಣ !
70 ರ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಘೋಷಿಸಿದ ಸಿಟಿ ಕಾರ್ಪೋರೇಷನ್
ತಿರುವನಂತಪುರ : ತಿರುವನಂತಪುರ ನಗರದಲ್ಲಿ 70 ಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು ಕೇರಳ ಸರಕಾರ ಘೋಷಿಸಿದೆ.
ಕರ್ನಾಟಕ ಸರಕಾರ KSRTCಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿದೆ. ಇದೆ ಹಿನ್ನೆಲೆಯಲ್ಲಿ ಕೇರಳ ಸರಕಾರ ತಿರುವನಂತಪುರ ನಗರದಲ್ಲಿ ಮಾತ್ರವೇ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು ಘೋಷಿಸಲಾಗಿದೆ.
ತಿರುವನಂತಪುರ ಸಿಟಿ ಕಾರ್ಪೊರೇಷನ್ ಈ ಯೋಜನೆಯ ಹೊಣೆಯನ್ನು ಹೊತ್ತಿದ್ದು, ಡಿಸೆಂಬರ್ ನಿಂದ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ತಿರುವನಂತಪುರ ನಗರವನ್ನು ಹಿರಿಯ ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸಲು ತೀರ್ಮಾನಿಸಿದ್ದು, ಫಲಾನುಭವಿಗಳು ಸಿಟಿ ಕಾರ್ಪೋರೇಷನ್ ನಿಂದ ಕಾರ್ಡ್ ಪಡೆದು, KSRTC ಬಸ್ ಗಳಲ್ಲಿ ಪ್ರಯಾಣ ಮಾಡಬಹುದು.
ಮುಂದಿನ ವರ್ಷದ ಡಿಸೆಂಬರ್ ನಲ್ಲಿ ತಿರುವನಂತಪುರ ಸಿಟಿ ಕಾರ್ಪೋರೇಷನ್ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಪಕ್ಷ ಮತ್ತೊಮ್ಮೆ ಅಧಿಕಾರ ಪಡೆಯಲು ಯೋಜನೆ ಜಾರಿಗೊಳಿಸುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏನೇ ಆದರೂ, ಹಿರಿಯ ನಾಗರಿಕರಿಗಂತೂ ಯೋಜನೆ ಅನುಕೂಲವಾಗಲಿದೆ.


