ಅನೈತಿಕ ಸಂಬಂಧ: ಪತಿಯನ್ನು ಕೊಂದು ನಾಟಕ ಮಾಡಿದ ಪತ್ನಿ

Share It

ಮೈಸೂರು: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಗಂಡನನ್ನೇ ಸಾಯಿಸಿರುವ ಘಟನೆ ನಂಜನಗೂಡು ತಾಲೂಕಿನ ಮಡುವಿಹಳ್ಳಿಯಲ್ಲಿ ನಡೆದಿದೆ.
ನಂಜನಗೂಡು ತಾಲೀಕಿನ ಮಲ್ಕುಂಡಿ ಗ್ರಾಮದ ಸದಾಶಿವ(43) ಎಂಬ ವ್ಯಕ್ತಿಯನ್ನು ಸರ್ಕಾರಿ ಶಾಸಲೆಯ ಬಳಿ ಕೊಲೆಯಾಗಿತ್ತು. ಪತ್ನಿ ರಾಜೇಶ್ವರಿ ಹಾಗೂ ತನ್ನಿಬ್ಬರು ಗೆಳೆಯರಾದ ರಂಗಸ್ವಾಮಿ, ಶಿವಯ್ಯ ಎನ್ನುವರ ಜೊತೆ ಸೇರಿಕೊಂಡು ಪತಿಯನ್ನೇ ಕೊಂದಿದ್ದಳು. ಬಳಿಕ ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸಿ ರಾಜೇಶ್ವರಿ ಬಿಕ್ಕಿಬಿಕ್ಕಿ ಅತ್ತಿದ್ದಳು. ಆದ್ರೆ, ಪೊಲೀಸರು ತನಿಖೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ.
ಅಕ್ಟೋಬರ್ 17 ರಂದು ಮಡುವಿನಹಳ್ಳಿ ಸರ್ಕಾರಿ ಶಾಲೆಯ ಪಕ್ಕದ ಗದ್ದೆಯ ಬದುವಿನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಸದಾಶಿವ ಪತ್ತೆಯಾಗಿದ್ದ. ನರಳಾಟವಾಡ್ತ ಇದ್ದ ಸದಾಶಿವನನ್ನ ಕಂಡ ಸ್ಥಳಿಯರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಮೃತ ಸದಾಶಿವ ಸಿಕ್ಕ ಜಾಗದಲ್ಲಿ ರಕ್ತಕೊಡಿಯಂತೆ ಹರಿದಿತ್ತು ಪಕ್ಕದಲ್ಲೇ ನೂರ ಒಂದು ರೂಪಾಯಿ, ನಿಂಬೆಹಣ್ಣು, ಎಲೆ ಅಡಿಕೆ ಕುಡಿಕೆ ಬಿದ್ದಿತ್ತು. ಘಟನೆಯನ್ನ ಕಂಡವರು ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಎಲ್ಲರೂ ಆರಂಭದಲ್ಲಿ ಅಂದುಕೊಂಡಿದ್ದರು.

ಪೃಕರಣ ದಾಖಲು ಮಾಡಿಕೊಂಡಿದ್ದ ಹುಲ್ಲಹಳ್ಳಿ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಾಗ ಪತ್ನಿ ರಾಜೇಶ್ವರಿ ಮೇಲೆ ಗುಮಾನಿಬಂದಿದೆ. ಆಕೆಯ ಮೊಬೈಲ್ ಟ್ರ್ಯಾಕ್ ಮಾಡಿದಮೇಲರ ಪೊಲೀಸರೇ ಶಾಕ್ ಆಗಿದ್ದಾರೆ. ರಾಜೇಶ್ವರಿ ಹಲವಾರು ಸಿಮ್ ಗಳನ್ನು ಬದಲಾವಣೆ ಮಾಡಿದ್ದು ಪ್ರಿಯಕರರಾದ ಶಿವಯ್ಯ, ರಂಗಸ್ವಾಮಿ ಜೊತೆ ನಿರಂತರವಾಗಿ ಮಾತನಾಡಿದ್ದು ಗೊತ್ತಾಗಿದೆ‌. ಪೊಲೀಸರು ರಾಜೇಶ್ವರಿಯನ್ನ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ನಿಜಬಣ್ಣ ಬಯಲಾಗಿದೆ.


Share It

You May Have Missed

You cannot copy content of this page