ಜೂಜಾಟ ಆಡುತ್ತಿದ್ದ 810 ಮಂದಿಯನ್ನು ಬಂಧಿಸಿದ ಪೊಲೀಸರು
ಬಳ್ಳಾರಿ: ದೀಪಾವಳಿ ಹಬ್ಬದಂದು ಜಿಲ್ಲಾದ್ಯಂತ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವವರ ಮೇಲೆ ಪೊಲೀಸರು ದಾಳಿ ಮಾಡಿ 130 ಪ್ರಕರಣ ದಾಖಲಿಸಿ, 810 ಜನರನ್ನು ಬಂಧಿಸಿದ್ದಾರೆ.
ದೀಪಾವಳಿ ಹಬ್ಬ ಬಂದರೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆ ನಿರ್ಮಾಣವಾಗುತ್ತವೆ. ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆ, ನೆರೆಯ ಆಂಧ್ರದ ಭಾಗಗಳಿಂದ ಸಹ ಇಸ್ಟೀಟ್ ಆಡಲು ಜಿಲ್ಲೆಯತ್ತ ಕೆಲವರು ಆಗಮಿಸುವುದು ಸಾಮಾನ್ಯವಾಗಿದೆ.
ಹೀಗಾಗಿ, ಕಾನೂನು ಬಾಹಿರ ಜೂಜಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅ.30ರಿಂದ ನವೆಂಬರ್ 3ರರವರೆಗೆ ಜಿಲ್ಲಾದ್ಯಂತ ಪೊಲೀಸರು ದಾಳಿ ನಡೆಸಿ 810 ಮಂದಿಯನ್ನು ಬಂಧನಕ್ಕೊಳಪಡಿಸಿ, 16 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ 130 ಪ್ರಕರಣಗಳು ದಾಖಲಾಗಿವೆ.


