ರಾಜಧಾನಿ ಜನರಿಗೆ ಲಾಲ್ ಬಾಗ್ ಪ್ರವೇಶ ಮತ್ತಷ್ಟು ದುಬಾರಿ

Share It

ಬೆಂಗಳೂರು: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಸಸ್ಯಕಾಶಿ ಲಾಲ್ ಬಾಗ್ ಪ್ರವೇಶ ಶುಲ್ಕ, ಕಾರ್ ಪಾರ್ಕಿಂಗ್, ಮಕ್ಕಳ‌ ಎಂಟ್ರಿ ಶುಲ್ಕ ಕೂಡ ಜಾಸ್ತಿ ಮಾಡಿದೆ.

ಈವರೆಗೆ ಪ್ರವೇಶ ಶುಲ್ಕ 30 ರೂ. ಇದ್ದು, ಈಗ 50 ರೂ.ಗೆ ಟಿಕೆಟ್ ದರ ಏರಿಕೆ ಮಾಡಲಾಗಿದೆ.‌ ಇನ್ನು, ಕಾರ್ ಪಾರ್ಕಿಂಗ್ ಶುಲ್ಕವನ್ನು 50 ರೂ.ನಿಂದ 60 ರೂ.ಗೆ ಏರಿಕೆ ಮಾಡಲಾಗಿದೆ.‌ ಮಕ್ಕಳ ಪ್ರವೇಶ ಶುಲ್ಕ 20 ರೂ ಇದ್ದುದನ್ನು 30 ರೂ.ಗೆ ಏರಿಕೆ ಮಾಡಲಾಗಿದೆ.‌

ಐದು ವರ್ಷಗಳಿಗೊಮ್ಮೆ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಪ್ರವೇಶ ಶುಲ್ಕವನ್ನು ಜಾಸ್ತಿ ಮಾಡುತ್ತದೆ. ಅದರಂತೆ 2018 ರಲ್ಲಿ ಲಾಲ್ ಬಾಗ್​​ನಲ್ಲಿ ಪ್ರವೇಶ ಶುಲ್ಕವನ್ನು 20 ರಿಂದ 30 ರೂ.ಗೆ ಜಾಸ್ತಿ ಮಾಡಲಾಗಿತ್ತು. ಇದೀಗ ಆರು ವರ್ಷದ ಬಳಿಕ ಎಂಟ್ರಿ ಫೀ, ಪಾರ್ಕಿಂಗ್ ಫೀ, ಮಕ್ಕಳ ಎಂಟ್ರಿ ಫೀ ಕೂಡ ಜಾಸ್ತಿಯಾಗಿದೆ.


Share It

You May Have Missed

You cannot copy content of this page