ಸ್ಥಳೀಯ ಕಾರ್ಯಕರ್ತೆಯನ್ನು ನೇಮಿಸದ ಹಿನ್ನೆಲೆ: ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಗ್ರಾಮಸ್ಥರು
ಗಂಗಾವತಿ: ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡ್ರಾಳ್ ಗ್ರಾಮದಲ್ಲಿ ಸ್ಥಳೀಯ ಕಾರ್ಯಕರ್ತೆಯನ್ನು ನೇಮಕ ಮಾಡುವಂತೆ ಕಳೆದ ದಿನಗಳ ಹಿಂದೆ ಸಿಡಿಪಿಒ ಅಧಿಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು.
ಬಾಂಡ್ರಾಳ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಿವೃತ್ತಿಗೊಂಡ ಕಾರಗಯಕರ್ತೆಯ ಸ್ಥಾನಕ್ಕೆ ಅಧಿಕಾರಿಗಳು ಉಡುಮ್ಕಲ್ ಗ್ರಾಮದ ಮಹಿಳೆಯನ್ನು ನೇಮಕ ಮಾಡಿ ಬಂಡ್ರಾಳ್ ಗ್ರಾಮಸ್ಥರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಾಂಡ್ರಾಳ್ ಗ್ರಾಮದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲ ಘಟನೆ ನಡೆದರೂ ಕೂಡ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದಿರುವುದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಪ್ಪ ಜೆಲ್ಲಿ, ಬಾಷಾ ಸಾಬ್ ಆನೆಗುಂದಿ, ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಗಬ್ಬುರ್, ಚಾಂದ್ ಪಾಷಾ ಗಡದ್ ಹಾಗೂ ಗ್ರಾಮದ ಯುವಕರಾದ ಪರಶುರಾಮ್ ಕೆರೆಹಳ್ಳಿ, ಭಾಷಾ ಸಾಬ್ ಗಡದ್, ಬೆಟ್ಟಪ್ಪ ಜೆಲ್ಲಿ, ಶಿವು ನಾಯಕ್, ಬೆಟ್ಟಪ್ಪ ತಿಪ್ಪನಾಳ, ಸಾಧಿಕ್ ಗದಗ್ ಇದ್ದರು.


