ಚೈತನ್ಯ ಶಾಲೆಯ 600 ಫಾರ್ಮುಲಾ ಫೆಸ್ಟ್ ಆಯೋಜನೆಯ ವಿಶ್ವದಾಖಲೆ
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಸಭಾ ಕ್ಷೇತ್ರದ ಚೈತನ್ಯ ಟೆಕ್ನೋ ಶಾಲೆಯಲ್ಲಿ ಶ್ರೀ ಚೈತನ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಮಕ್ಕಳಿಗೆಗಳಲ್ಲಿ 600. ಫಾರ್ಮುಲಾ ಫೆಸ್ಟ್ ( ದಿ ಕ್ವೆಸ್ಟ್ ಫಾರ್ ಎಕ್ಸಲೆನ್ಸ್ ) ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇಶದ 20 ರಾಜ್ಯಗಳಲ್ಲಿ ಇರುವ ತಮ್ಮ ಚೈತನ್ಯ ಸಂಸ್ಥೆಗಳಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಮಕ್ಕಳು ಐಕ್ಯೂ ಅನ್ನೂ ವಿಜ್ಞಾನಿ ಐನಸ್ಟಿನ್ ರಂತೆ ರೂಪಿಸಿ ಶಕುಂತಲಾ ದೇವಿ ರಂತೆ ಮಾನವ ಕಂಪ್ಯೂಟರ್ ನ್ನಾಗಿಸಿ ಶ್ರೀನಿವಾಸ್ ರಾಮಾನುಜಮ್ ಅವರಂತೆ ಇತಿಹಾಸ ಸೃಷ್ಟಿಸೋ ಸಲುವಾಗಿ ಇಂದು ಶಾಲೆಯ 3 ರಿಂದ 10 ವರ್ಷದ ಮಕ್ಕಳು ಮ್ಯಾತಮಾಟಿಕ್ಸ್ ಫಾರ್ಮುಲಾದಲ್ಲಿ ಸೂಪರ್ ಹ್ಯಾಟ್ರಿಕ್ ವಿಶ್ವ ದಾಖಲೆ ಮಾಡಿದ್ದಾರೆ.
ಸುಮಾರು 10,000 ಸಾವಿರ ವಿದ್ಯಾರ್ಥಿಗಳಿಗೆ 120 ಕ್ಯಾಂಪಸ್ ಗಳಲ್ಲಿ 600 ಫಾರ್ಮುಲಾ ಫೆಸ್ಟ್ ( ದಿ ಕ್ವೆಸ್ಟ್ ಫಾರ್ ಎಕ್ಸಲೆನ್ಸ್ ) ಎಂಬ ಕಾರ್ಯಕ್ರಮ ಹಮ್ಮಿಕೊಂಡು ಸೂಪರ್ ವರ್ಲ್ಡ್ ರೆಕಾರ್ಡ್ ಪ್ರಯತ್ನ ಮಾಡುವಲ್ಲಿ ಹೊರಟಿದ್ದಾರೆ. ಪ್ರತೀ ವರ್ಷದಂತೆ ಕಳೆದ ವರ್ಷ ಯೋಗ, ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ಮಕ್ಕಳು ಈ ವರ್ಷ ಮಕ್ಕಳಿಗೆ ಫಾರ್ಮುಲಾ ಗಳನ್ನು ಹೇಳುವ ಮೂಲಕ ಮತ್ತೊಮ್ಮೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ಶೈಕ್ಷಣಿಕ ವಲಯದಲ್ಲಿ ಅಕ್ಷರ ಕ್ರಾಂತಿ ಮಾಡಲು ಹೊರಟಿದ್ದಾರೆ.
ಇದಕ್ಕೆ ಸಂಸ್ಥೆಯ ಎಲ್ಲ ಆಡಳಿತ ವರ್ಗ ಸಿಬ್ಬಂದಿಗಳು ಸಾಥ್ ನೀಡುತ್ತಿದ್ದು, ಅದರಂತೆ ಮಕ್ಕಳು ಪೋಷಕರು ಕೂಡ ತಮ್ಮ ಮಕ್ಕಳ ಉಜ್ವಲ್ ಭವಿಷ್ಯಕ್ಕಾಗಿ ಇಂತಹ ಕಾರ್ಯಕ್ರಮ ಗಳಿಗೆ ಸ್ವತಃ ತಾವೇ ಮುಂದೆ ಬಂದು ಸಂಸ್ಥೆಯ ಈ ಮಹತ್ತರ ಕಾರ್ಯಕ್ಕೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದು ಶಾಲೆಯ ಪ್ರಿನ್ಸಿಪಾಲ್ ಸೌಮ್ಯಾ ಮಾಧ್ಯಮಕ್ಕೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವಂಶಿ ಕೃಷ್ಣ, ಪ್ರಿನ್ಸಿಪಾಲ್ ಸೌಮ್ಯ, ಸೇರಿದಂತೆ ಶಾಲಾ ಶಿಕ್ಷಕರು, ಶಿಕ್ಷಕಿಯರು ಮಕ್ಕಳು ಪಾಲ್ಗೊಂಡು ಯಶಸ್ವಿ ಗೊಳಿಸಿದರು.


