ಬೆಂಗಳೂರು: ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯ ಭೋಜನಕ್ಕೆ ಹೆಸರುವಾಸಿಯಾಗಿರುವ ರಾಮೇಶ್ವರಂ ಕೆಫೆ ತನ್ನ ನೂತನ ಶಾಖೆಯನ್ನು ಇಂದಿರಾನಗರದಲ್ಲಿ ಪುನರಾರಂಭಗೊಳಿಸಲಾಯಿತು.
ಇಂದಿರಾನಗರದ 100 ಅಡಿ ರಸ್ತೆಯಲ್ಲಿ 15,000 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ಸುಮಾರು 400 ಜನರಿಗೆ ಆತಿಥ್ಯ ನೀಡಬಹುದಾದ ವಿಶಾಲವಾದ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಈ ಕುರಿತು ಮಾತನಾಡಿದ ರಾಮೇಶ್ವರಂ ಕೆಫೆಯ ಸಹ-ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್, ಇಂದಿರಾನಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ. ಈ ಭಾಗದ ಜನರಿಗಾಗಿ ನಮ್ಮ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯ ಭೋಜನವನ್ನು ಗುಣಮಟ್ಟ ಹಾಗೂ ರುಚಿಕರವಾಗಿ ಉಣಬಡಿಸುವ ಉದ್ದೇಶದಿಂದ ವಿಶಾಲವಾದ ಸ್ಥಳದಲ್ಲಿ ನಿರ್ಮಿಸಿದೇವೆ. ಸುಮಾರು 120 ಹೆಚ್ಚು ಬಗೆಯ ವಿಶೇಷ ಭಕ್ಷ್ಯಗಳು ಲಭ್ಯವಿದೆ.
ಮತ್ತೊಂದು ವಿಶೇಷವೆಂದರೆ, ನಮ್ಮ ಸಾಂಪ್ರದಾಯಕತೆಗೆ ಒತ್ತು ನೀಡುವ ಉದ್ದೇಶದಿಂದ ರಾಮೇಶ್ವರಂ ಕೆಫೆಯನ್ನು ದೇವಾಲಯದ ಮಾದರಿಯಲ್ಲಿಯೇ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿ ಭೇಟಿ ನೀಡುವವರಿಗೆ ನಮ್ಮ ಧಾರ್ಮಿಕತೆಯ ಅನುಭವ ದೊರೆಯಬೇಕು.
ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, ೨೦೨೧ರಲ್ಲಿ ಪ್ರಾರಂಭಗೊಂಡ ನಮ್ಮ ಜರ್ನಿ ಇಲ್ಲಿಯವರೆಗೂ ಸಾಗಿದ್ದು, ೨ ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡುವ ಸಾಮರ್ಥ್ಯ ದೊರೆತಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಿಕೊಡುವ ಸದುದ್ದೇಶ ಹೊಂದಿದ್ದೇವೆ ಎಂದರು.
ರಾಮೇಶ್ವರಂ ಕೆಫೆ ಇದೀಗ ಸ್ವಿಗ್ಗಿ, ಝೊಮಾಟೊನಲ್ಲೂ ಲಭ್ಯವಿದೆ ಎಂದು ಹೇಳಿದರು.