ದೂರು ನೀಡಲು ಹೋದ ದಲಿತ ಯುವತಿಗೆ ಜಾತಿನಿಂದನೆ: ಡಿವೈಎಸ್‌ಪಿ ವಿರುದ್ಧವೇ ಎಫ್‌ಐಆರ್

Share It

ಅಥಣಿ: ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ದಲಿತ ಯುವತಿಯೊಬ್ಬಳಿಗೆ ನಿಂದಿಸಿದ ಹಿನ್ನೆೆಲೆಯಲ್ಲಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ?: ನಗರದ ಆಸ್ಪತ್ರೆೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಎಂಬ ವ್ಯಕ್ತಿಯು ಅದೇ ಆಸ್ಪತ್ರೆೆಯಲ್ಲಿ ನರ್ಸ್ ಆಗಿದ್ದ ಶ್ರುತಿ ಹಲಗೆವಾರ ಎಂಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾಾನೆ. ಕೊನೆಗೆ ಮದುವೆ ಯಾಗುವುದಿಲ್ಲವೆಂದು ಹೇಳಿದ್ದಾನೆ. ಯುವತಿಯು ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆರೋಪಿತರು ದೂರು ವಾಪಸ್ ಪಡೆಯುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ದೂರು ನೀಡಲು ಯುವತಿ ಡಿವೈಎಸ್‌ಪಿ ಕಚೇರಿಗೆ ಹೋದಾದ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳ್ಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ಯುವತಿಗೆ ಜಾತಿನಿಂದನೆ ಮಾಡಿದ್ದಲ್ಲದೆ, ಠಾಣೆಯಿಂದ ಹೊರಹಾಕಿದ್ದಾರೆ. ನೊಂದ ಯುವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ, ಡಿವೈಎಸ್‌ಪಿ ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆ ಹಿನ್ನೆೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಟ್
ದಲಿತರ ಮೇಲೆ ಬಲಿಷ್ಠರ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇಂತಹವರಿಗೆ ಶಿಕ್ಷೆೆ ಕೊಡಬೇಕಾದ ಆರಕ್ಷಕರೇ ರಕ್ಷಣೆಗೆ ನಿಂತಿದ್ದಾಾರೆ. ನನಗಾದ ಅನ್ಯಾಾಯವನ್ನು ಪೊಲೀಸರಿಗೆ ತಿಳಿಸಿದರೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೆೆ. ಆದರೆ ಪೊಲೀಸರು ನನ್ನೊೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಲ್ಲದೇ, ಹಿಗ್ಗಾಮುಗ್ಗಾ ನಿಂದಿಸಿದ್ದಾಾರೆ. ನನಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿಲ್ಲಿಸುವುದಿಲ್ಲ.

  • ಶ್ರತಿ ಹಲಗೆವಾರ
    ನೊಂದ ಯುವತಿ

Share It
Previous post

ಸಿದ್ದರಾಮಯ್ಯ ಮಾಸ್ ಲೀಡರ್, ಹೀಗಾಗಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ:ಡಿಸಿಎಂ ಡಿ.ಕೆ. ಶಿವಕುಮಾರ್

Next post

KSRTC ಈಗ ರಾಷ್ಟ್ರೀಯ ಕಾರ್ಪೋರೇಟ್ ಕಿಂಗ್: ನಾಯಕತ್ವದ ಚಾಣಕ್ಯ ಪ್ರಶಸ್ತಿ ಪಡೆದ ಸಂಸ್ಥೆ

You May Have Missed

You cannot copy content of this page