ಸುದ್ದಿ

12 ನೇ ವರ್ಷದ ಅದೃಷ್ಟದ ಕಾರಿಗೆ ಅಂತಿಮ ವಿದಾಯ !

Share It


ಅಮ್ರೇಲಿ: ತಮ್ಮ 12 ವರ್ಷದ ಅದೃಷ್ಟದ ಕಾರಿಗೆ ಉದ್ಯಮಿಯೊಬ್ಬರು ವಿದ್ಯುಕ್ತವಾಗಿ ಅಂತಿಮ ವಿದಾಯ ಹೇಳಿದ ಅಪರೂಪದ ಘಟನೆ ಗುಜರಾತ್‌ನ ಅಮ್ರೇಲಿ ಪಟ್ಟಣದಲ್ಲಿ ನಡೆದಿದೆ. ಇದಕ್ಕಾಗಿ ಅವರು, 4 ಲಕ್ಷ ರು.ಗಳನ್ನು ಖರ್ಚು ಮಾಡಿ, ಬಂಧುಬಳಗವನ್ನೆಲ್ಲ ಕರೆದು ಸಮಾರಂಭ ಏರ್ಪಡಿಸಿದ್ದರು.

ಸೂರತ್‌ನಲ್ಲಿ ಕಟ್ಟಡ ನಿರ್ಮಾಣ ಉದ್ಯಮಿಯಾಗಿರುವ ಸಂಜಯ್ ಪೋಲಾರ ಎಂಬುವವರು ತನ್ನ ತೋಟದ ಮನೆಯಲ್ಲಿ ಕಾರಿಗೆ ಅಂತಿಮ ಕ್ರಿಯೆ ನಡೆಸಿದ್ದು, ಕಾರನ್ನು ತೋಟದಲ್ಲಿ ಸಂಸ್ಕಾರ ಮಾಡಿ, ಅದರ ಸುತ್ತಲೂ ಸಸಿಗಳನ್ನು ನೆಟ್ಟು, ತಮ್ಮ ಅದೃಷ್ಟದ ಕಾರಿನ ನೆನಪು ಸ್ಥಿರವಾಗಿರುವಂತೆ ಮಾಡುವ ಸಲುವಾಗಿ ಇಷ್ಟೆಲ್ಲ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪೋಲಾರ್ ಅವರ ಕುಟುಂಬ 12 ವರ್ಷದ ಹಿಂದೆ ಮಾರುತಿ ಸುಜುಕಿ ವ್ಯಾಗನರ್ ಕಾರನ್ನು ಖರೀದಿ ಮಾಡಿದ್ದು, ಅದನ್ನು ಹಳೆಯದಾಗುತ್ತಿದ್ದಂತೆ ಮಾರಾಟ ಮಾಡುವ ಬದಲು ಶಾಶ್ವತವಾಗಿ ಅದರ ನೆನಪು ಉಳಿಸಿಕೊಳ್ಳಬೇಕು ಎಂದು ತೀರ್ಮಾನಿಸಿತ್ತು. ಇದಕ್ಕೆ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಿ, ಅಲ್ಲಿ ಸಸಿಗಳನ್ನು ನೆಟ್ಟು ನೂರ್ಕಾಲ ಅದರ ನೆನಪು ಉಳಿಯುವಂತೆ ಮಾಡಲು ತೀರ್ಮಾನಿಸಿತ್ತು.

ಕುಟುಂಬ ಈ ಕಾರ್ಯಕ್ರಮಕ್ಕಾಗಿ ಪುರೋಹಿತರು, ಫೋಟೋಗ್ರಾಫರ್‌ಗಳನ್ನೆಲ್ಲ ಬುಕ್ ಮಾಡಿತ್ತು. ಪುರೋಹಿತರು, ಅಂತಿಮ ವಿಧಿವಿಧಾನಗಳನ್ನು ಶಾಸ್ತೊçÃಕ್ತವಾಗಿ ನೆರವೇರಿಸುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದ ಫೋಟೋ ಮತ್ತು ವಿಡಿಯೋವನ್ನು ನೆನಪಿನಲ್ಲಿ ಉಳೀಸುವ ಸಲುವಾಗಿ ತೆಗೆಸಲಾಗಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕಾರ್ಯಕ್ರಮಕ್ಕೆ 4 ಲಕ್ಷಕ್ಕೂ ಅಧಿಕ ಹಣವನ್ನು ಕುಟುಂಬ ಖರ್ಚು ಮಾಡಿದ್ದು, ೧೫೦೦ಕ್ಕೂ ಹೆಚ್ಚು ಜನ ಬಂಧು ಬಳಗ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದದವರಿಗೆಲ್ಲ ಬಗೆಬಗೆಯ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ವರದಿಯಾಗಿದೆ.


Share It

You cannot copy content of this page