ಸುದ್ದಿ

ನವಲಗುಂದ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಹಾಗೂ ಅಭಿವೃದ್ಧಿಗೆ 15 ಲಕ್ಷ ಅನುದಾನ : ಶಾಸಕ ಎನ್.ಹೆಚ್. ಕೋನರಡ್ಡಿ

Share It

ನವಲಗುಂದ : ನ್ಯಾಯವಾದಿಗಳ ಬಹುದಿನದ ಬೇಡಿಕೆಯಾದ ನವಲಗುಂದ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ ಹಾಗೂ ನಿರ್ವಹಣೆ ಸಲುವಾಗಿ ರೂ. 15 ಲಕ್ಷ ಅನುದಾನ ಬಿಡುಗಡೆ ಮಾಡಿ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ನವಲಗುಂದ ವಕೀಲರ ಸಂಘದ ಕಟ್ಟಡವನ್ನು ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು ವಕೀಲರ ಸಂಘದ ಪದಾಧಿಕಾರಿಗಳು ದಿನಾಂಕ: 06 ರಂದು ನನಗೆ ಮನವಿ ಸಲ್ಲಿಸಿ ವಕೀಲರ ಸಂಘವನ್ನು ತಾವು ಶಾಸಕರಿದ್ದ ಅವಧಿಯಲ್ಲಿ 3 ಅಂತಸ್ಥಿನ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕಟ್ಟಡವಾಗಿದ್ದು ಪ್ರತಿ ತಿಂಗಳ ವಿದ್ಯುತ್ ಬಿಲ್ ತುಂಬಲು ತೊಂದರೆಯಾಗುತ್ತಿದ್ದು ಅದಕ್ಕೆ ಪರಿಹಾರವೆಂದರೆ ಸೋಲಾರ ಅಳವಡಿಸುವದು.

ಆದ, ಕಾರಣ, ಕೂಡಲೇ ಸೋಲಾರ ಅಳವಡಿಸಿ ಶಾಶ್ವತ ಪರಿಹಾರ ಮಾಡಲು ಮನವಿ ಸಲ್ಲಿಸಿದ್ದರು. ಅವರ ಮನವಿ ಮೆರೆಗೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿದಾಗ ಅವರು ಅದಕ್ಕೆ ಸ್ಪಂಧಿಸಿ ಸರ್ಕಾರದಿಂದ 15 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಕೋನರಡ್ಡಿ ಹೇಳಿದರು.

ಎಲ್ಲ ನ್ಯಾಯವಾದಿಗಳ ಪರವಾಗಿ ಎಂ.ಟಿ. ಹೆಬಸೂರ, ಸಿ,ಎಂ, ಪಾಟೀಲ, ಶ್ಯಾಮಸುಂದರ ಡಂಬಳ, ಎಸ್,ಎಂ, ಹಿರೇಮಠ, ಎನ್,ವಾಯ್, ಹೊಂಗಲ ಮುಂತಾದವರು ಮಾತನಾಡಿ ಶಾಸಕರಿಗೆ ಮನವಿ ಸಲ್ಲಿಸಿದಾಗ ತಕ್ಷಣ ಅನುದಾನ ಬಿಡುಗಡೆ ಮಾಡಿ ವಕೀಲರ ಸಂಘಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಕೋನರಡ್ಡಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಬಿ.ಜಿ. ಕೋನರಡ್ಡಿ, ಆರ್,ಎಂ,ರಮಜಾನಿ, ಕಾರ್ಯದರ್ಶಿ ನಿವಾಸ ಮರಡ್ಡಿ, ಶ್ರೀಮತಿ ಶಾಂತವ್ವ ಚಿಕ್ಕನರಗುಂದ, ಕೌಶಲ್ಯ ಪಾಟೀಲ, ಎಸ್,ಎಸ್, ಸೋಮನಕಟ್ಟಿ, ವಾಯ್.ಬಿ. ಕುರಹಟ್ಟಿ, ಸಿ,ಸಿ, ಅಕ್ಕಿ, ಎ,ಎಲ್, ಜಾಂಬೋಟಿ, ಎ,ಎಸ್, ಹೊಳೆಣ್ಣವರ, ಸಿ,ಎಂ, ಪಾಟೀಲ, ಸಿ,ಸಿ, ಹಿರೇಮಠ, ಎಸ್,ಎ, ಪಟ್ನಿ, ಎನ್,ಬಿ, ಸವದಿ, ಪಿಡಬ್ಲುಡಿ ಎಇ ನಿಖೀಲ ಭರಡಿಶೇಟ್ಟರ ಹಾಗೂ ಇತರೇ ವಕೀಲರು ಉಪಸ್ಥಿತರಿದ್ದರು.


Share It

You cannot copy content of this page