ಪತ್ನಿಯ ಅನೈತಿಕ ಸಂಬಂಧ : ಸುಪಾರಿ ನೀಡಿ ಪತಿಯ ಹತ್ಯೆ ಮಾಡಿಸಿದ್ದ ಪತ್ನಿ ಸೇರಿ ಮೂವರ ಬಂಧನ
ಬೆಳಗಾವಿ : ಕಟ್ಟೆಯ ಮೇಲೆ ಮಲಗಿದ್ದ ಪತಿಯ ಹತ್ಯೆಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಪತ್ನಿ ಸೇರಿದಂತೆ ಮೂವರನ್ನು ನೇಸರಗಿ ಪೊಲೀಸರು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿಯ ಅನೈತಿಕ ಸಂಬಂಧವೇ ಪತಿಯ ಕೊಲೆಗೆ ನೇರವಾದ ಕಾರಣ ಎನ್ನಲಾಗಿದೆ. ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಕಟ್ಟೆಯ ಮೇಲೆ ಪತಿಯನ್ನು ಕೊಲೆ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ಮೂವರು ಆರೋಪಿಗಳನ್ನು ನೇಸರಗಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಮನೆಯ ಕಟ್ಟೆಯ ಮೇಲೆ ಮಲಗಿದ್ದ ನಿಂಗಪ್ಪ ಅರವಳ್ಳಿ ಎಂಬುವವನನ್ನು ಕೊಚ್ಚಿ ಕೊಲೆ ಮಾಡಲು ಆತನ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ನಿಂಗಪ್ಪನ ಪತ್ನಿ ನಿಲ್ಲಮ್ಮ ಹಾಗೂ ವಣ್ಣೂರು ಗ್ರಾಮದ ಯುವಕನ ಜೊತೆಗೆ ಸೇರಿಕೊಂಡು ಪಕ್ಕದ ಗ್ರಾಮದ ಯಲ್ಲಪ್ಪನಿಗೆ ಸುಪಾರಿ ಕೊಟ್ಟು ಕೊಲೆ ಮಾಡಲು ಹೇಳಿದ್ದಳು ಎನ್ನಲಾಗಿದೆ. ಯುವಕ ಸಹ ನಿಲ್ಲವ್ವ ಪ್ರಿಯಕರನಾಗಿದ್ದಾನೆ. ಸುಪಾರಿ ಪಡೆದು ಹತ್ಯೆ ಮಾಡಿದ್ದ ಯಲ್ಲಪ್ಪ ಕೂಡಾ ಪತ್ನಿ ನಿಲವ್ವನ ಮಾಜಿ ಪ್ರಿಯಕರನಾಗಿದ್ದ ಎನ್ನಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ನೇಸರಗಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪತಿಯ ಕೊಲೆ ಮಾಡಿದ ಪತ್ನಿ ಹಾಗೂ ಸುಪಾರಿ ಪಡೆದ ಗ್ಯಾಂಗ್ ನ್ನು 24 ಗಂಟೆಯಲ್ಲಿ ನೇಸರಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


