ಬೆಂಗಳೂರು: ಬೆಂಗಳೂರು ಮಹಾನಗರವೇ ಹಾಗೆ. ಪ್ರತಿಯೊಬ್ಬರಿಗೂ ಬದುಕು ಕೊಡುತ್ತದೆ. ಅದೇ ರೀತಿ ಇಲ್ಲಿ ಬದುಕುವ ಪ್ರತಿ ವ್ಯಕ್ತಿಯೂ ಒಂದೊಂದು ರೀತಿಯಲ್ಲಿ ಪರಿಣಿತಿ ಪಡೆದಿರುತ್ತಾನೆ. ಇಂತಹ ಪರಿಣಿತಿಯ ಪ್ರದರ್ಶನ ಇದೀಗ ವೈರಲ್ ಆಗಿದೆ.
ಐಐಎಂ ಅಹಮದಾಬಾದ್ ನಲ್ಲಿ ಪದವಿ ಪಡೆದು ಫಿನ್ ಟೆಕ್ ಸ್ಟಾರ್ಟ್ ಅಪ್ ಆರಂಭಿಸಿದ್ದ ವೆಟ್ರಿ ವೆಂಥನ್ ಎಂಬ ವ್ಯಕ್ತಿಗೆ ಆತನ ಮನೆ ಮಾಲೀಕನೆ ಟೆಕ್ ಸಲಹೆಗಾರನಂತೆ ಮಾಡಿದ ಉಪಕಾರವನ್ನು ಅವರು ನೆನಪಿಸಿಕೊಂಡಿದ್ದಾರೆ. ಅವರು ಟ್ವೀಟ್ ಇದೀಗ ಭಾರಿ ವೈರಲ್ ಆಗಿದ್ದು, ಜಾಲತಾಣಗಳಲ್ಲಿ ಬೆಂಗಳೂರಿನ ಪ್ರತಿ ಪ್ರಜೆಯು ವ್ಯವಹಾರ ಪರಿಣಿತ ಎಂಬ ಮೆಚ್ಚುಗೆ ವ್ಯಕ್ತವಾಗುತ್ತದೆ.
ಮನೆ ಮಾಲೀಕರು ಬಾಡಿಗೆ ಪಡೆಯುವುದಕ್ಕಷ್ಟೇ ಸೀಮಿತವಾಗದೆ ಬಾಡಿಗೆದಾರನ ಬ್ಯುಸಿನೆಸ್ ಬಗ್ಗೆ ಅನೇಕ ಸಲಹೆಗಳನ್ನು ನೀಡಿದ್ದರು. ಆಗಾಗ ಕೆಫೆಯಲ್ಲಿ ಭೇಟಿಯಾಗಿ ಬಾಡಿಗೆದಾರನ ಸ್ಟಾರ್ಟ್ ಅಪ್ ಬೆಳವಣಿಗೆಗೆ ಬೇಕಾದ ಸಲಹೆ ನೀಡುತ್ತಿದ್ದರು. ಇದರಿಂದ ತಮ್ಮ ಬ್ಯುಸಿನೆಸ್ ಬೆಳೆಸಲು ಅನುಕೂಲವಾಯ್ತು ಎಂದು ವೆಟ್ರಿ ಬರೆದುಕೊಂಡಿದ್ದಾರೆ.
ಮನೆ ಮಾಲೀಕರು ತಮ್ಮೊಂದಿಗೆ ನಡೆಸಿದ ಕೆಲವು ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ‘ಬೆಂಗಳೂರಿನಲ್ಲಿ ಮಾತ್ರವೇ ಮನೆ ಮಾಲೀಕ ಕೂಡ ನಿಮ್ಮ ಬ್ಯುಸಿನೆಸ್ ಗುರುವಾಗಬಹುದು’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕ ಕಮೆಂಟ್ ಗಳು ಬಂದಿದ್ದು, ಅನೇಕರು ಬೆಂಗಳೂರಿನ ಜನರ ಮನಸ್ಥಿತಿಯನ್ನು ಮೆಚ್ಚಿಕೊಂಡಾಡಿದ್ದಾರೆ. ಅಲ್ಲಲ್ಲಿ ಕೆಲವರು ತಮಾಷೆಯಾಗಿ ಬಾಡಿಗೆ ವಿಚಾರದಲ್ಲಿ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ, ಟ್ವೀಟ್ ವೈರಲ್ ಆಗಿದೆ.
