ರಸ್ತೆ ಅಪಘಾತದಲ್ಲಿ ಸಾವು: ವಿಶ್ವದಲ್ಲೇ ಭಾರತಕ್ಕೆ ಮೊದಲ ಸ್ಥಾನ
ಉತ್ತರ ಪ್ರದೇಶವೊಂದರಲ್ಲೇ ಶೇ. 60 ರಷ್ಟು ಸಾವುಗಳು
ಅತಿವೇಗ, ಅಜಾಗರೂಕತೆ ಚಾಲನೆ, ಕಳಪೆ ರಸ್ತೆ ಕಾರಣ
ವೈಟ್ ಪೇಪರ್ ಸ್ಪೆಷಲ್
ಬೆಂಗಳೂರು: ರಸ್ತೆ ಅಪಘಾತಗಳ ತಡೆಗೆ ಸರಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಭಾರತ ಅಪಘಾತಗಳಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಅಂಕಿಅಂಶಗಳ ಪ್ರಕಾರ 2019 ರಲ್ಲಿ 1.59 ಲಕ್ಷ, 2022 ರಲ್ಲಿ 1.69 ಲಕ್ಷ, 2023 ರಲ್ಲಿ 1.73 ಲಕ್ಷ ಜನರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಇದರಲ್ಲಿ 35 ಸಾವಿರ ಪಾದಚಾರಿಗಳು ಹಾಗೂ ಶಾಲೆ ಮತ್ತು ಕಾಲೇಜುಗಳ ಹೊರಗೆ ಮರಣವೊಂದಿದ್ದಾರೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ 2020, ಮತ್ತು 2021 ರಲ್ಲಿ ಸಾವಿನ ಸಂಖ್ಯೆ ಕಡಿಮೆಯಿತ್ತು. ಇದಕ್ಕೆ ಕಾರಣ ಆ ಸಂದರ್ಭದಲ್ಲಿ ಸೃಷ್ಟಿಯಾಗಿದ್ದ ಕೋವಿಡ್ ಬಿಕ್ಕಟ್ಟು ಮತ್ತು ಲಾಕ್ ಡೌನ್ ನಿಂದ ರಸ್ತೆಗಳಲ್ಲಿ ವಾಹನಗಳ ಓಡಾಟ ಕಡಿಮೆಯಿದ್ದದ್ದು ಎನ್ನಲಾಗಿದೆ. ಆದರೆ, ಅನಂತರದ ವರ್ಷಗಳಲ್ಲಿ ಸಾವಿನ ಸಂಖ್ಯೆ ಅತ್ಯಧಿಕವಾಗಿರುವುದು ದುರಂತವೇ ಸರಿ.
ಇಷ್ಟೆಲ್ಲ ಅಪಘಾತಗಳ ಸಂಖ್ಯೆಯ ಕಾರಣಕ್ಕೆ ಭಾರತ ವಿಶ್ವದಲ್ಲಿಯೇ ಅತ್ಯಧಿಕ ರಸ್ತೆ ಅಪಘಾತ ನಡೆಯುವ ದೇಶವಾಗಿದೆ. ದೇಶದಲ್ಲೇ ಅತಿಹೆಚ್ಚು ಅಪಘಾತ ನಡೆಯುವ ರಾಜ್ಯ ಉತ್ತರ ಪ್ರದೇಶವಾಗಿದ್ದು, ಇಲ್ಲಿ ದೇಶದ ಶೇ. 6 ರಷ್ಟು ಹೆದ್ದಾರಿ ಇದೆಯಾದರೂ, ಒಟ್ಟಾರೆ, ಸಾವಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶದಲದಲಿಯೇ ಶೇ. 60 ರಷ್ಟು ಸಾವುಗಳು ಸಂಭವಿಸುತ್ತವೆ.
ಸಮಪರ್ಕವಲ್ಲದ ರಸ್ತೆ ನಿರ್ಮಾಣ, ಅಜಾಗರೂಕತೆ, ಸಾರ್ವಜನಿಕರಿಗೆ ನಿಯಮಗಳ ಕುರಿತು ಮಾಹಿತಿ ಇಲ್ಲದಿರುವುದು, ಕಾನೂನಿನ ಮೇಲಿನ ಅಸಡ್ಡೆ, ಅಪಘಾತದ ನಂತರ ಸೂಕ್ತ ಸಮಯಕ್ಕೆ ಅಂಬ್ಯುಲೆನ್ಸ್ ಸೇವೆ ಹಾಗೂ ಚಿಕಿತ್ಸೆ ಸಿಗದಿರುವುದು ಹೆಚ್ಚಿನ ಸಾವುಗಳಿಗೆ ಕಾರಣ ಎನ್ನಲಾಗಿದೆ.


