ಆಲ್ಬರ್ಟ್ ಐನ್ ಸ್ಟೈನ್’ IQ ಮೀರಿಸುತ್ತೆ ಈ ಭಾರತೀಯ ಮೂಲದ ಬಾಲಕನ ಬುದ್ಧಿಮತ್ತೆ

Share It

ಲಂಡನ್ : ಭಾರತೀಯ ಮೂಲದ ಬಾಲಕ ಕ್ರಿಶ್ ಅರೋರಾ ತನ್ನ IQ ಶಕ್ತಿಯ ಮೂಲಕ ಆಲ್ಬರ್ಟ್ ಐನ್ ಸ್ಟೈನ್ ಗಿಂತ ಹೆಚ್ಚು ಬುದ್ದಿವಂತ ಎಂದು ಘೋಷಿಸಲಾಗಿದೆ.

ಆಲ್ಬರ್ಟ್ ಐನ್ ಸ್ಟೈನ್ IQ ಹಂತದ 160 ಪಾಯಿಂಟ್ ಗಳನ್ನು ಹೊಂದಿದ್ದರು. ಆದರೆ, ಕ್ರಿಶ್ ಅರೋರಾ ಅವರು, 162 IQ ಅಂಕಗಳನ್ನು ಪಡೆದುಕೊಂಡಿದ್ದಾನೆ. ಆ ಮೂಲಕ ಐನ್ ಸ್ಟೈನ್ ಬುದ್ಧಿಮತ್ತೆಯನ್ನು ಮೀರಿಸಿದ್ದಾನೆ.

ಹತ್ತು ವರ್ಷದ ಕ್ರಿಶ್ ಅರೋರಾ, ನಿರರ್ಗಳವಾಗಿ ಮಾತಮಾಡುವುದು, ಓದುವುದರ ಜತೆಗೆ 4 ನೇ ತರಗತಿಯಲ್ಲಿಯೇ ದಶಮಾಂಶ ಸೇರಿದಂತೆ ವಿವಿಧ ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಾನೆ.

ಮೌಲಿ ಮತ್ತು ನಿಶ್ಚಲ್ ಎಂಬ ಭಾರತೀಯ ದಂಪತಿಗಳ ಪುತ್ರನಾದ ಕ್ರಿಶ್ ಅರೋರಾ ಹೌನ್ಸ್ಲೋದಲ್ಲಿ ಸರಕಾರಿ ಶಾಲೆಯಲ್ಲಿ ಬಾಲಕ ಓದುತ್ತಿದ್ದು, ಅತ್ಯುತ್ತಮ ಫಿಯಾನೋ ವಾದಕನೂ ಆಗಿದ್ದಾನೆ. ಆದರೆ, ಆತ ತನ್ನ ಸಂಗೀತ ಪ್ರೀತಿಗಿಂತ ಗಣಿತದ‌ ಮೇಲಿನ ಪ್ರೀತಿ ಜಾಸ್ತಿ ಎಂದು ಕ್ರಿಶ್ ತಿಳಿಸಿದ್ದಾರೆ ಎಂದು ‘ದಿ ಮಿರರ್’ ವರದಿ ಮಾಡಿದೆ.

ಬಾಲಕ ಒಂದು ಅಥವಾ ಎರಡು ನಿಮಿಷದಲ್ಲಿ Worldle ಒಗಟು ಬಿಡಿಸುತ್ತಾನೆ. ಕೇವಲ ನಾಲ್ಕು ತಿಂಗಳಿಂದಷ್ಟೇ ಚೆಸ್ ಆಡುತ್ತಿದ್ದರೂ, ಆತ 1600 ರ FIDE ಹೊಂದಿರುವ ತನ್ನ ಮಾರ್ಗದರ್ಶಕನನ್ನು ಆತ ಸುಲಭವಾಗಿ ಸೋಲಿಸುತ್ತಾನೆ ಎಂದು ಆತನ ಪೋಷಕರು ಸಂಸತ ವ್ಯಕ್ತಪಡಿಸಿದ್ದಾರೆ.


Share It

You May Have Missed

You cannot copy content of this page