1.3 ಲಕ್ಷ ಪಿಎಂ ಇಂರ್ಟರ್ ಶಿಫ್ ಯೋಜನೆಗೆ 6.2 ಲಕ್ಷ ಅರ್ಜಿ ಸಲ್ಲಿಕೆ
ಬೆಂಗಳೂರು: ಕಳೆದ ಸಾಲಿನಿಂದ ಆರಂಭಿಸಿರುವ ಪಿಎಂ ಇಂಟರ್ ಶಿಫ್ ಯೋಜನೆಗೆ 1.3 ಲಕ್ಷ ಅವಕಾಶಗಳಿದ್ದು, ಅದಕ್ಕಾಗಿ 6.2 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ನಿರುದ್ಯೋಗಿ ಯುವಕರಿಗೆ ಖಾಸಗಿ ಕಾರ್ಪೋರೆಟ್ ಕಂಪನಿಗಳ ಸಹಭಾಗಿತ್ವದಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದ್ದು, ಕಾರ್ಪೋರೆಟ್ ಕಂಪನಿಗಳು ಉತ್ಸಾಹದಿಂದ ಈ ಯೋಜನೆಗೆ ಪ್ರತಿಕ್ರಿಯಿಸಿವೆ. ಹೀಗಾಗಿ, 1.3 ಲಕ್ಷ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯ ತಿಳಿಸಿವೆ.
500 ಕಾರ್ಪೋರೆಟ್ ಕಂಪನಿಗಳ ಮೂಲಕ ಯುವಜನತೆಗೆ ಉದ್ಯೋಗವಕಾಶ ಕಲ್ಪಿಸಲು ಕೇಂದ್ರ ಸರಕಾರ ಈ ಯೋಜನೆ ಜಾರಿಗೊಳಿಸಿದೆ. ಕೌಶಲವನ್ನು ಅಭಿವೃದ್ಧಿ ಗೊಳಿಸಿ, ಖಾಸಗಿ ಕಂಪನಿಗಳಿಗೆ ನುರಿತ ಉದ್ಯೋಗಿಗಳನ್ನು ಒದಗಿಸುವ ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕಾಗಿ 840 ಕೋಟಿ ರು. ಅನುದಾನ ನಿಗದಿ ಮಾಡಿದ್ದು, ಖಾಸಗಿ ಕಂಪನಿಗಳ CSR ಬಳಸಿ, ತರಬೇತಿ ನೀಡಲಾಗುತ್ತದೆ. ಆ ಮೂಲಕ ಉದ್ಯೋಗ ಸೃಷ್ಟಿಯ ಹೊಸ ದಾರಿಯನ್ನು ನಿರ್ಮಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.


