ಕಲಬುರಗಿ : ದರ್ಶನ್ ಸಿಗರೇಟ್ ಸೇದಿದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದರು. ಆದರೂ, ಕಲಬುರಗಿ ಜೈಲಿನಲ್ಲಿ ನಾಲ್ವರು ಖೈದಿಗಳು ಎಣ್ಣೆ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ.
ಖೈದಿಗಳು ಎಣ್ಣೆ ಕುಡಿಯುತ್ತಿರುವ ವಿಡಿಯೋ ಸೆರೆಹಿಡಿಯಲಾಗಿದ್ದು, ಸಿಗರೆಟ್, ಫೋನ್ ಮತ್ತು ಚಾರ್ಜರ್ ಗಳು ಇರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಜೈಲಾಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎದ್ದಿದೆ.
ಇತ್ತೀಚೆಗೆ ನಾಲ್ವರು ಖೈದಿಗಳನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಈ ನಾಲ್ವರು ಜೈಲಿನ ವರಿಷ್ಠಾಧಿಕಾರಿಯ ಕಾರನ್ನೇ ಸ್ಫೋಟಿಸುವ ಬೆದರಿಕೆ ಹಾಕಿದ್ದರು. ಇದೀಗ ಅದೇ ಖೈದಿಗಳ ಎರಡು ತಿಂಗಳ ಹಿಂದಿನ ವಿಡಿಯೋ ವೈರಲ್ ಆಗಿದೆ.