ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರೋಡ್ನಲ್ಲಿರುವ ಟಿಂಬರ್ ಯಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಮೊದಲು ಟಿಂಬರ್ ಯಾರ್ಡ್ನಲ್ಲಿ ಕಾಣಿಸಿಕೊಂಡಿದೆ,
ಬಳಿಕ ಲೋವಬಲ್ ಸ್ಪೋರ್ಟ್ ಹೆಸರಿನ ಗಾರ್ಮೆಂಟ್ಸ್ ಕಟ್ಟಡ, ವಾಹನ ವಾಶ್ ಕೇಂದ್ರಕ್ಕೂ ಹಬ್ಬಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೆಂಕಿ ತಗುಲಿದ ಪರಿಣಾಮ 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಟ್ಟೆ ಭಸ್ಮವಾಗಿದೆ. ಅಲ್ಲದೆ ವಾಹನ ವಾಶ್ ಕೇಂದ್ರದಲ್ಲಿದ್ದ 40ಕ್ಕೂ ಹೆಚ್ಚು ಬೈಕ್ ಗಳು, BMW ಕಾರುಗಳು ಸಹ ಸುಟ್ಟು ಭಸ್ಮವಾಗಿವೆ.
ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.