ನ್ಯೂಸ್ ಡೆಸ್ಕ್ : ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ಎಲನ್ ಮಸ್ಕ್ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದ್ದು, ಇದೀಗ ಅವರು 400 ಬಿಲಿಯನ್ ಡಾಲರ್ ಆಸ್ತಿ ಗಳಿಸಿದ ಮೊದಲ ವ್ಯಕ್ತಿ ಎನಿಸಿದ್ದಾರೆ.
ಬ್ಲೂಮ್ ಬರ್ಗ್ ವರದಿಯ ಪ್ರಕಾರ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಷೇರುಗಳ ಮಾರಾಟ ಗಣನೀಯ ಏರಿಕೆ ಕಂಡ ಬೆನ್ನಲ್ಲೇ ಮಸ್ಕ್ ಆಸ್ತಿ ಮೌಲ್ಯ ಹೆಚ್ಚಾಗಿದೆ. ಅದು 400 ಬಿಲಿಯನ್ ಡಾಲರ್ ದಾಟುವ ಮೂಲಕ ಎಲನ್ ಮಸ್ಕ್ ದಾಖಲೆ ನಿರ್ಮಿಸಿದ್ದಾರೆ.
ಫೋರ್ಬ್ಸ್ ಅಂದಾಜಿನ ಪ್ರಕಾರ ಎಲನ್ ಮಸ್ಕ್ ಒಟ್ಟಾರೆ ಆಸ್ತಿಯ ಮೌಲ್ಯ 386 ಬಿಲಿಯನ್ ಡಾಲರ್ ಆಗಿದೆ. ಎರಡನೇ ಸ್ಥಾನದಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 244 ಬಿಲಿಯನ್ ಡಾಲರ್ ಹಾಗೂ ಒರಾಕಲ್ ಮಾಲೀಕ ಲ್ಯಾರಿ ಎಲಿಸನ್ 203 ಬಿಲಿಯಾಸ್ತಿ ಹೊಂದಿರುವ ಮತ್ತಿಬ್ಬರು ಶ್ರೀಮಂತರಾಗಿದ್ದಾರೆ.
ಮಸ್ಕ್ ಆದಾಯ ಹೆಚ್ಚಳದಲ್ಲಿ ಸ್ಪೇಸ್ ಎಕ್ಸ್ ಮತ್ತು ಟೆಸ್ಲಾದ ಷೇರು ಮೌಲ್ಯದ ಹೆಚ್ಚಳ ಪ್ರಮುಖ ಪಾತ್ರವಹಿಸಿದೆ. ಟೆಸ್ಲಾದ ಮಾರುಕಟ್ಟೆ ಮೌಲ್ಯ ಸುಮಾರು 350 ಕೋಟಿಯಿದ್ದು, ಟೆಸ್ಲಾ ತನ್ನ ವಾರ್ಷಿಕ ವಹಿವಾಟನ್ನು 50 ಬಿಲಿಯನ್ ಡಾಲರ್ ಗೆ ಹೆಚ್ಚಿಸಿಕೊಂಡಿದೆ.
ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆ ಎಲನ್ ಮಸ್ಕ್ ಬೆಂಬಲಿಸಿದ್ದರು. ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಸ್ಕ್ ಮಾಲೀಕತ್ವದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮೌಲ್ಯ ಶೇ. 65 ರಷ್ಟು ಹೆಚ್ಚಳವಾಗಿತ್ತು. ಈ ಕಾರಣದಿಂದ ಒಟ್ಟಾರೆ ಮಸ್ಕ್ ಆದಾಯ 400 ಕೋಟಿ ದಾಟುವ ಮೂಲಕ ಹಣಕಾಸಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ.