ಬೆಂಗಳೂರು: ತನ್ನ ಜತೆಗೆ ಬರಲು ಒಪ್ಪದ ಪ್ರೇಯಸಿಯನ್ನು ಇರಿದುಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಡ್ ಪೀಲ್ಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮಹುವಾ ಮಂಡಲ್ ಕೊಲೆಯಾದ ಯುವತಿ, ಆಕೆಯನ್ನು ಚಾಕುವಿನಿಂದ ಇರಿದು ಕೊಂದ ಆರೋಪಿ ಮಿಥುನ್ ಕೂಡ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪಶ್ಚಿಮ ಬಂಗಾಳದ ಮಹುವಾ ಮಂಡಲ್ ಎಂಬ ಯುವತಿ ಕಳೆದ ಹತ್ತು ವರ್ಷಗಳಿಂದ ನಗರದ ವೈಟ್ ಪೀಲ್ಡ್ ನ ಶೆಡ್ ನಲ್ಲಿ ವಾಸವಿದ್ದರು. ಆಕೆ ಹೌಸ್ ಕೀಪಿಂಗ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಗೆ ಕಳೆದ ಎಂಟು ವರ್ಷದ ಹಿಂದೆ ಮಿಥುನ್ ಪರಿಚಯವಾಗಿತ್ತು.
ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸಿದ ಮಿಥುನ್ ಆಕೆ ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅನಂತರ ಬಂಧನದ ಭೀತಿಯಿಂದ ಪ್ರಶಾಂತ್ ಬಡಾವಣೆಯಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೈಟ್ ಪೀಲ್ಡ್ ಪೊಲೀಸರು, ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಕೆಲಸ ನಿರ್ವಹಿಸುತ್ತಿದ್ದ ಜಾಗ ಹಾಗೂ ವಾಸವಿದ್ದ ಬಡಾವಣೆಯಲ್ಲಿ ತಪಾಸಣೆ ನಡೆಸಿದ್ದಾರೆ.