ಬೆಂಗಳೂರು: ಹೇರೋಹಳ್ಳಿ ಕೆರೆಗೆ ಸೇರುತ್ತಿರುವ ತ್ಯಾಜ್ಯ ಸಂಗ್ರಹ ತಡೆಯಲು ಮತ್ತು ಕೆರೆಯನ್ನು ಸ್ವಚ್ಛಗೊಳಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳು ಮತ್ತು ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಎಎಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಹೇರೋಹಳ್ಳಿ ಕೆರೆ ಬೆಂಗಳೂರಿನ ಪ್ರಸಿದ್ಧ ಕರೆಗಳಲ್ಲೊಂದು. ಆದರೆ, ಕೆರೆಗೆ ಸುತ್ತಮುತ್ತಲಿನ ತ್ಯಾಜ್ಯವನ್ನು ಹರಿಸಲಾಗುತ್ತಿದೆ. ಅದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ವಿಫಲವಾಗಿದ್ದಾರೆ. ಇದೀಗ ತ್ಯಾಜ್ಯವೆಲ್ಲ ಕೆರೆಯಲ್ಲಿ ಸಂಗ್ರಹವಾಗಿ ದುರ್ವಾಸನೆ ಹರಡುತ್ತಿದೆ.
ಅತಿದೊಡ್ಡ ವಾಕಿಂಗ್ ಟ್ರ್ಯಾಕ್ ಹೊಂದಿರುವ ಕೆರೆಯ ವ್ಯಾಪ್ತಿಯಲ್ಲಿ ಕೆಟ್ಟ ವಾಸನೆಯಿಂದ ಜನ ಹೈರಾಣಾಗಿದ್ದಾರೆ. ಸ್ವಚ್ಮಾಡುವಂತೆ ಅನೇಕ ಸಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರ ಆಗ್ರಹಕ್ಕೆ ಜತೆಗೂಡಿದ AAP ಮುಖಂಡರಾದ ಶಶಿಧರ್ ಆರಾಧ್ಯ, ಚನ್ನಕೇಶವ ಹಾಗೂ ಇನ್ನಿತರ ಮುಖಂಡರು ಬಿಬಿಎಂಪಿ ಅಧಿಕಾರಿಗಳು ಮತ್ತು ಜನರ ಮನವಿಗೆ ಸ್ಪಂದಿಸದ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.