ಅಪರಾಧ ರಾಜಕೀಯ ಸುದ್ದಿ

ಸಚಿವೆಗೆ ಮಾನಹಾನಿ ಪದ ಬಳಸಿ ನಿಂದನೆ ಆರೋಪ: ಖಾನಾಪುರ ಠಾಣೆಗೆ ಸಿ.ಟಿ.ರವಿ

Share It

ಬೆಳಗಾವಿ: ವಿಧಾನ ಪರಿಷತ್‌ನಲ್ಲಿ ಗುರುವಾರ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ‘ಅವ್ಯಾಚ್ಯ ಪದ ಬಳಸಿ ನಿಂದಿಸಿದ ಆರೋಪದ ಮೇಲೆ, ಬಂಧಿಸಲಾದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ಯಲಾಯಿತು.

ಎಫ್‌ಐಆ‌ರ್ ಆದ ನಂತರ ಸುವರ್ಣ ವಿಧಾನಸೌಧಕ್ಕೆ ಬಂದ ಹಿರೇಬಾಗೇವಾಡಿ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದರು. ನೇರವಾಗಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು. ಅಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡರು.

ಸಿ.ಟಿ.ರವಿ ವಿರುದ್ಧ ಘೋಷಣೆ ಮೊಳಗಿಸಿದರು. ಅವರ ಫೋಟೊಗೆ ಚಪ್ಪಲಿಯಿಂದ ಹೊಡೆದರು. ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಕಾರ್ಯಕರ್ತರು ಠಾಣೆಗೆ ನುಗ್ಗಬಹುದು ಎಂಬ ಮುನ್ನೆಚ್ಚರಿಕೆಯಿಂದಾಗಿ ಸಿ.ಟಿ.ರವಿ ಅವರನ್ನು ತಕ್ಷಣ ಖಾನಾಪುರ ಠಾಣೆಗೆ ಕರೆದೊಯ್ಯಲಾಯಿತು.

ಸಿ.ಟಿ.ರವಿ ಬಂಧನ ಖಂಡಿಸಿ ಧರಣಿ ಸುವರ್ಣ ಸೌಧದಲ್ಲಿ ಧರಣಿ ನಡೆಸಿದ ವಿಪಕ್ಷ ನಾಯಕ ಆ‌ರ್.ಅಶೋಕ್, ವಿಪಕ್ಷ ಉಪನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಆರಗ ಜ್ಞಾನೇಂದ್ರ ಅವರನ್ನೂ ವಶಕ್ಕೆ ಪಡೆದರು.

ಎಲ್ಲರನ್ನೂ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page