ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ: ಕರ್ನಾಟಕದ ಯೋಧರು ಹುತಾತ್ಮ
ಬೆಳಗಾವಿ: ಜಮ್ಮು- ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸುಮಾರು 300 ಅಡಿ ಆಳದ ಕಂದಕಕ್ಕೆ ಭಾರತೀಯ ಸೇನಾ ವಾಹನ ಬಿದ್ದ ಪರಿಣಾಮ ಬೆಳಗಾವಿ ತಾಲೂಕಿನ ಪಂತನಗರದ ಯೋಧ ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದ ದಯಾನಂದ ಕಲ್ಲಪ್ಪ ತಿರಕನ್ನವರ (44) ಹುತಾತ್ಮರಾಗಿದ್ದಾರೆ.
11ನೇ ಮರಾಠಾ ಲಘು ಪದಾತಿದಳದ ಮಿಂಡರ್ ದಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಯಾನಂದ ಮಂಗಳವಾರ ಡಿ. 24ರಂದು ಮಧ್ಯಾಹ್ನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಇನ್ನೆರಡು ವರ್ಷದಲ್ಲಿ ನಿವೃತ್ತರಾಗಲಿದ್ದರು.
ಇನ್ನೊಂದು ಘಟನೆಯಲ್ಲಿ ಮಣಿಪುರದ ಇಂಫಾಲ್ ನಲ್ಲಿ ಚಿಕ್ಕೋಡಿ ತಾಲೂಕಿನ ಯೋಧ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ(43) ಹುತಾತ್ಮ ವೀರಯೋಧ. ಇವರು ಇನ್ನು 2-3 ತಿಂಗಳಲ್ಲಿ ನಿವೃತ್ತರಾಗಲಿದ್ದರು.


