ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಟರ್ ಲಿಸ್ಟ್ ರಿಗ್ಗಿಂಗ್ : ರಾಹುಲ್ ಗಾಂಧಿ ಗಂಭೀರ ಆರೋಪ
ಬೆಳಗಾವಿ : ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿದ್ದು, ವೋಟರ್ ಲಿಸ್ಟ್ ರಿಗ್ಗಿಂಗ್ ನಡೆದಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಸುಮಾರು 72 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ 118 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, 102 ಸ್ಥಾನಗಳನ್ನು ಗೆದ್ದಿದೆ. ಇದು ಎಲ್ಲೋ ಏನೋ ತಪ್ಪಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಯು ಬಹಜಮತ ಪಡದು ಅಧಿಕಾರ ಪಡೆದ ನಂತರ ಕಾಂಗ್ರೆಸ್ ನಿಯೋಗ ಮತದಾರರ ಪಟ್ಟಿಯಲ್ಲಿ ಆಗಿರುವ ಭಾರಿ ಬದಲಾವಣೆಯ ಕುರಿತು ಆಯೋಗದ ಗಮನ ಸೆಳೆದಿತ್ತು. 47 ಲಕ್ಷ ಮತದಾರರ ಹೆಚ್ಚುವರಿ ಸೇರ್ಪಡೆಯನ್ನು ಪ್ರಶ್ನಿಸಿತ್ತು.
ಚುನಾವಣಾ ಆಯೋಗ 39 ಲಕ್ಷ ಮತದಾರರ ಸೇರ್ಪಡೆಯಾಗಿರುವುದನ್ನು ಚುನಾವಣಾ ಆಯೋಗ ಒಪ್ಪಿಕೊಂಡಿತ್ತು. ಶೇ. 2 ರಷ್ಟು ಮತದಾರರ ಹೆಚ್ಚಳ ಸಾಮಾನ್ಯ ಸಂಗತಿ ಎಂದು ಹೇಳಿತ್ತು. ಆದರೆ, ಸೇರ್ಪಡೆಯಾಗಿರುವ ಬಹುತೇಕ ಮತದಾರರು 18-19 ರ ವಯೋಮಾನದವರು ಎಂಬುದು ಗಮನಾರ್ಹ.