ಅಪರಾಧ ರಾಜಕೀಯ ಸುದ್ದಿ

ಡಿ.ಕೆ. ಸುರೇಶ್ ತಂಗಿ ಹೆಸರಲ್ಲಿ ಮತ್ತೊಂದು ವಂಚನೆ : ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್

Share It

ಬೆಂಗಳೂರು: ಚಿನ್ನದಂಗಡಿ ಮಾಲೀಕರಿಗೆ ವಂಚನೆ ಮಾಡಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಗೌಡ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಐಶ್ವರ್ಯಾ ಪತಿ ಹರೀಶ್, ಬೌನ್ಸರ್ ಗಜಾ ಎಂಬುವವರನ್ನು ವಿರುದ್ದವೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ.

ಐಶ್ವರ್ಯಾ ಗೌಡ, ತಾವು ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದರು. ತಾವು ರಿಯಲ್ ಎಸ್ಟೇಟ್ ವ್ಯವಹಾರ, ಗೋಲ್ಡ್ ಬ್ಯುಸಿನೆಸ್ ಸೇರಿ ಕೆಲವೊಂದು ವ್ಯವಹಾರದಲ್ಲಿ ತೊರಗಿಸಿಕೊಂಡಿರುವುದಾಗಿ ತಿಳಿಸಿದ್ದರು. ಹೀಗಾಗಿ, ಅವರನ್ನು ನಂಬಿ ನಾವು ಮೋಸ ಹೋಗಿದ್ದೆವೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ಐಶ್ವರ್ಯಾ ಗೌಡ ತಾವು ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು 2022-23 ರವರೆಗಿನ ಅವಧಿಯಲ್ಲಿ ಸುಮಾರು 3.25 ಹಣ ಪಡೆದಿದ್ದರು. ಜತೆಗೆ 430 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದರು. ಆದರೆ, ಇದೆಲ್ಲವನ್ನೂ ವಾಪಸ್ ಕೇಳಿದಾಗ ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.


Share It

You cannot copy content of this page