ಉಪಯುಕ್ತ ಸುದ್ದಿ

ಹೊಸ ವರ್ಷಕ್ಕೆ BMTC ವಿಶೇಷ ಬಸ್ ಸೇವೆ : 5.48 ಕೋಟಿ ಸಂಗ್ರಹ

Share It

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ  ಬಿಎಂಟಿಸಿ ರಾತ್ರಿ 2 ಗಂಟೆಯವರೆಗೆ ಬಸ್ ಸೇವೆ ಒದಗಿಸಿದ್ದು, ಇದರಿಂದ 5.48 ಕೋಟಿ ಆದಾಯ ಸಂಗ್ರಹವಾಗಿದೆ.

ರಾತ್ರಿ 12 ನಂತರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸುಮಾರು 4,840 ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಲಾಗಿದೆ. ಒಟ್ಟಾರೆ, ಡಿಸೆಂಬರ್ 31 ರಂದು 35.66 ಲಕ್ಷ ಪ್ರಯಾಣಿಕರು BMTC ಬಸ್ ಸೇವೆಯನ್ನು ಬಳಸಿದ್ದಾರೆ. ಇದರಿಂದ 5.48 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

ನಿತ್ಯ ರಾತ್ರಿ 11 ಗಂಟೆಯವರೆಗೆ ಬಿಎಂಟಿಸಿ ಬಸ್ ಸೇವೆ ಒದಗಿಸುತ್ತಿದ್ದು, ಡಿ.31ರ ರಾತ್ರಿ 11 ಗಂಟೆಯಿಂದ ರಾತ್ರಿ 2 ರವರೆಗೆ ಹೆಚ್ಚುವರಿ ವಿಶೇಷ ಬಸ್ ಗಳನ್ನು ಓಡಿಸಲಾಯಿತು. ಈ ವೇಳೆ ದಾಖಲೆ ಪ್ರಮಾಣದ ಪ್ರಯಾಣಿಕರು ಪ್ರಯಾಣಿಸಿದ್ದು, ಆದಾಯ ಸಂಗ್ರಹಕ್ಕೆ ಕೊಡುಗೆ ನೀಡಿದೆ.

ಮಹಾತ್ಮ ಗಾಂಧಿ ರಸ್ತೆಯಿಂದ ನಗರದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಗಳನ್ನು ಓಡಿಸಲಾಯಿತು. ಪ್ರಮುಖವಾಗಿ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ, ವೈಟ್ ಪೀಲ್ಡ್, ಜೆಪಿ ನಗರ, ಬನಶಂಕರಿ ಸೇರಿ ನಗರದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಗಳು ಕಾರ್ಯಾಚರಣೆ ನಡೆಸಿದವು.


Share It

You cannot copy content of this page