ಉಪಯುಕ್ತ ಸುದ್ದಿ

ಬಸ್ ಪ್ರಯಾಣ ದರ ಎರಿಕೆಗೆ ಸರಕಾರದ ತೀರ್ಮಾನ: ಶೇ.15 ರಷ್ಟು ಏರಿಕೆಗೆ ಸಚಿವ ಸಂಪುಟ ಅಸ್ತು

Share It

ಬೆಂಗಳೂರು: KSRTC ಸೇರಿದಂತೆ ನಾಲ್ಕು ನಿಗಮಗಳಲ್ಲಿನ ಬಸ್ ಪ್ರಯಾಣದರ ಏರಿಕೆಗೆ ಸರಕಾರ ಮುಂದಾಗಿದ್ದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಾರಿಗೆ ನಿಗಮಗಳ ಶೇ. 15ರಷ್ಟು ಟಿಕೆಟ್ ದರ ಏರಿಕೆ ಬೇಡಿಕೆ ಈಡೇರಿದಂತಾಗುತ್ತದೆ. ಸದ್ಯ ಈ ವಿಚಾರ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದ್ದು, ಪ್ರಯಾಣದರ ಎಂದಿನಿಂದ ಜಾರಿಗೆ ಬರಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ.

‌ಶಕ್ತಿ ಯೋಜನೆ, ಡೀಸೆಲ್‌ ದರ ಏರಿಕೆ ಸೇರಿ ಇತ್ಯಾದಿ ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಅನಿವಾರ್ಯವಾಗಿ ಪ್ರಯಾಣ ದರವನ್ನು ಏರಿಕೆ ಮಾಡಲು ಸರಕಾರ ಮುಂದಾಗಿದೆ.

ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ, ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿತ್ತು. ಹೀಗಾಗಿ, ಕ್ಯಾಬಿನೆಟ್‌ ಅನುಮತಿ ಪಡೆದು ದರ ಏರಿಕೆ ಘೋಷಣೆ ಮಾಡಲು ಸರಕಾರ ಮುಂದಾಗಿತ್ತು.


Share It

You cannot copy content of this page