ಬೆಂಗಳೂರು: KSRTC ಸೇರಿ ವಿವಿಧ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಮಾತಮಾಡಿದ ಅವರು, ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಕಳೆದ ಹತ್ತು ವರ್ಷದಿಂದ ಏರಿಕೆ ಮಾಡಿಲ್ಲ, KSRTC ಬಸ್ ಪ್ರಯಾಣ ದರವನ್ನು 2020 ರಲ್ಲಿ ಏರಿಕೆ ಮಾಡಲಾಗಿತ್ತು. ಕಳೆದ ಐದು ವರ್ಷದಿಂದ ಏರಿಕೆ ಮಾಡಿರಲಿಲ್ಲ. ಹೀಗಾಗಿ, ಬಸ್ ಟಿಕೆಟ್ ದರ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಡಿಸೇಲ್ ದರ ಅನೇಕ ಸಲ ಏರಿಕೆಯಾಗಿದೆ. ನಿಗಮಗಳ ನಿರ್ವಹಣೆಯ ಹೊರೆ, ನೌಕರರು ವೇತನದಲ್ಲಿ ಏರಿಕೆಯಾಗಿವೆ. ಹೀಗಾಗಿ, ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.