ಅಪರಾಧ ಸುದ್ದಿ

“ಸೈಬರ್ ಕ್ರೈಂ ಜಾಲ”ಕ್ಕೆ ಬಲೆ ಬೀಸಿದ ಬೆಂಗಳೂರು ಪೊಲೀಸರು

Share It

ಬೆಂಗಳೂರು: ಎಸ್‌ಎಂಎಸ್ ಮತ್ತು ಕರೆಗಳ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಖತರ್ ನಾಕ್ ಸೈಬರ್ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಟೀರಿರ‍್ಸ್ ಡಿಸೈನ್ ಕಂಪನಿ ನಡೆಸಲು ವಾಣಿಜ್ಯ ಮಳಿಗೆಯನ್ನು ಬಾಡಿಗೆ ಪಡೆದಿದ್ದ ಖದೀಮರು, ಸುಮಾರು ೨೦ ಜನ ಕೆಲಸಗಾರರನ್ನು ನೇಮಿಸಿಕೊಂಡಿದ್ದರು. ಹೊರಗಿನಿಂದ ಎಲ್ಲವೂ ಇಂಟೀರಿಯರ್ ಡಿಸೈನ್ ನಡೆಸುವಂತೆಯೇ ನಟಿಸಿ, ೪ ತಿಂಗಳಿAದ ಕಾರ್ಯನಿರ್ವಹಿಸುತ್ತಿದ್ದರು.

ಸಾವಿರಾರು ಮೊಬೈಲ್ ಸಂಖ್ಯೆಗಳನ್ನು ಸಂಗ್ರಹ ಮಾಡಿಟ್ಟುಕೊಂಡು, ಗಿಫ್ಟ್ ಕಾರ್ಡ್, ಕ್ರೆಡಿಟ್ ಕಾರ್ಡ್ನ ಪಿನ್ ಬದಲಾವಣೆ ಮಾಡುತ್ತಿದ್ದರು. ಕರೆ ಮಾಡಿ ಕೆವೈಸಿ ಅಪ್ಡೇಟ್ ಮಾಡಬೇಕು ಎಂಬ ನೆಪದಲ್ಲಿ ಜನರಿಗೆ ವಂಚನೆ ಮಾಡಲಾಗುತ್ತಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿ, ಜನರಿಗೆ ವಂಚನೆ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಪ್ರಕರಣ ಸಂಬAಧ ಕಂಪನಿಯ ಮಾಸ್ಟರ್ ಮೈಂಡ್ ಜಿತೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಚರಣೆಯಲ್ಲಿ ಡಿಸಿಪಿ ಪಾತಿಮಾ ಸೇರಿ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page