ಆರೋಗ್ಯ ಸುದ್ದಿ

HMPV Breaking: ಚೀನಾದಲ್ಲಿ ಹೊಸ ವೈರಸ್ ಕಾಟ : ಭಾರತದಲ್ಲಿ ಶುರುವಾಗಿದೆ ಭೀತಿ

Share It

ಬೆಂಗಳೂರು: ಕರೋನಾದಿಂದ ಕಂಗೆಟ್ಟಿದ್ದ ವಿಶ್ವಕ್ಕೆ ಮತ್ತೊಂದು ವೈರಸ್ ಭೀತಿ ಕಾಡುತ್ತಿದ್ದು, ಚೀನಾದಲ್ಲಿ ಈಗ ಹೊಸ ವೈರಸ್ ಕಾಟ ಆರಂಭವಾಗಿದೆ.

HMPV ಹೆಸರಿನ ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಜನರು ಸೋಕಿಗೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗಳು ರೋಗಗಳಿಂದ ತುಂಬಿ ತುಳುಕುತ್ತಿದ್ದು, ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಪರದಾಟ ನಡೆಸುತ್ಯಿದ್ದಾರೆ ಎನ್ನಲಾಗಿದೆ.

ಚೀನಾದ ಆಸ್ಪತ್ರೆಗಳ ಇಂತಹ ಪರಿಸ್ಥಿತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಶ್ವಾದ್ಯಂತ ಭೀತಿ ಹುಟ್ಟಿಸಿದೆ. ಅದರಲ್ಲೂ ನೆರೆಯವರಾದ ಭಾರತಕ್ಕೆ ಚೀನಾದ ಈ ವೈರಸ್ ಕಾಟ ಹೆಚ್ಚಾಗಿ ಕಾಡತೊಡಗಿದೆ‌.

ವೈರಸ್ ಭಾರತಕ್ಕೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಭಾರತ ಸಜ್ಜಾಗುತ್ತಿದೆ ಎಂದು ಭಾರತೀಯ ಆರೋಗ್ಯ ಮಹಾನಿರ್ದೇಶನಾಲಯ ತಿಳಿಸಿದೆ. ವೈರಸ್ ಗೆ ಹೆದರುವ ಅವಶ್ಯಕತೆಯಿಲ್ಲ. ಸರಕಾರ ವೈರಸ್ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸರಕಾರ ತಿಳಿಸಿದೆ.

ಏನಿದು HMPV ವೈರಸ್ ?
HMPV ಎಂದರೆ, Human metapneumovirus. ಇದು ಕೂಡ ಕರೋನಾ ಮಾದರಿಯ ವೈರಸ್ ಆಗಿದ್ದು, ಸೋಂಕು ತಗುಲಿದ ಮೂರು ದಿನಗಳಲ್ಲಿ ಉಲ್ಬಣವಾಗುತ್ತದೆ. ಆರು ದಿನಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಲಿದ್ದು, ಉಸಿರುಗಟ್ಟಿಸಿ ಸಾವನ್ನಪ್ಪುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಯಾರಿಗೆಲ್ಲ ಹೆಚ್ಚು ಅಪಾಯ?
HMPV ವೈರಸ್ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ಕಾಡುತ್ತದೆ. ಮಕ್ಕಳು, ವೃದ್ಧರು ಹೆಚ್ಚಾಗಿ ಸೋಂಕಿಗೆ ಬಲಿಯಾಗುವ ಸಾಧ್ಯೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಕ್ಷಣಗಳೇನು?

  • ವಿಪರೀತ ನೆಗೆಡಿ ಮತ್ತು ಜ್ವರ
  • ಅತಿಯಾದ ಶೀನುವಿಕೆ,
  • ಕಣ್ಣು ಕೆಂಪಾಗುವುದು
  • ವಿಪರೀತ ಕೆಮ್ಮು
  • ಉಸಿರಾಟದ ತೊಂದರೆ

Share It

You cannot copy content of this page