ಬೆಂಗಳೂರು: ಮಡದಿ ಮತ್ತು ಆಕೆಯ ಕುಟುಂಬದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪತ್ನಿ, ಆಕೆಯ ತಾಯಿ ಹಾಗೂ ಅವರ ಸಹೋದರನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಹಾಗೂ ಪತ್ನಿಯ ಸೋದರ ಮಾವ ಅನುರಾಗ್ ಸಿಂಘಾನಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ಅವರಿಗೆ ಬೆಂಗಳೂರು ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅತುಲ್ ಸುಭಾಷ್, ತನ್ನ ಪತ್ನಿ ತನಗೆ ವಿಚ್ಛೇದನ ನೀಡುವ ಸಲುವಾಗಿ 3 ಕೋಟಿ ಬೇಡಿಕೆಯಿಟ್ಟಿದ್ದರು. ಇದರಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 90 ನಿಮಿಷಗಳ ವಿಡಿಯೋ ಹಾಗೂ 40 ಪುಟಗಳ ಡೆತ್ ನೋಟ್ ಬರೆದು, ತಮಗಾದ ಕಿರುಕುಳದ ಬಗ್ಗೆ ವಿವರಿಸಿದ್ದರು.
ಈ ಹಿನ್ನೆಲೆಯಲ್ಲಿ ಅತುಲ್ ಪತ್ನಿ, ಅತ್ತೆ ಮತ್ತು ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಇದೀಗ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವುದನ್ನು ವಿರೋಧಿಸಿ ನಾವು 15 ಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದೇವೆ. ಹೈಕೋರ್ಟ್ ರಿಲೀಫ್ ಕೊಡದಿದ್ದರೆ, ಸುಪ್ರೀಂ ಕೋರ್ಟ್ ನಲ್ಲೊ ಪ್ರಶ್ನೆ ಮಾಡುತ್ತೇವೆ ಎಂದು ಸರ್ಕಾರಿ ಅಭಿಯೋಕರಾದ ಪೊನ್ನಣ್ಣ ತಿಳಿಸಿದ್ದಾರೆ.